ಡಾ. ಕೆ. ಶಿವರಾಮ ಕಾರಂತ ಸ.ಪ್ರ.ದ ಕಾಲೇಜು, ಬೆಳ್ಳಾರೆ ಇದರ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಹೂಡಿಕೆಯ ಅರಿವು ಕಾರ್ಯಕ್ರಮ (ಇನ್ವೆಸ್ಟ್ಮೆಂಟ್ ಅವೇರ್ನೆಸ್
ಪ್ರೋಗ್ರಾಮ್) ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಭವಾನಿ ಪ್ರಭು, ಪ್ರಧಾನ ವ್ಯವಸ್ಥಾಪಕರು, ಸರಸ್ವತಿ ಕ್ರೆಡಿಟ್ ಸೌಹಾರ್ದ ಸೊಸೈಟಿ , ಪುತ್ತೂರು ಇವರು ವಿದ್ಯಾರ್ಥಿಗಳಿಗೆ ಹೂಡಿಕೆ ಮಹತ್ವ ಹಾಗೂ ಮುನ್ನೆಚ್ಚರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವಸಂತ ಬೋರ್ಕರ್ ಭಾಗವಹಿಸಿ ಉಳಿತಾಯದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋಭಾವ ಬೆಳೆಸುವ ಬಗ್ಗೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಕೆ. ವಹಿಸಿದ್ದರು.
I Q A C. ಸಂಚಾಲಕರಾದ ಶ್ರೀಮತಿ ಜ್ಯೋತಿ ಎಸ್ . ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುನೀತಾ ನಾಯ್ಕ್ ಕಾರ್ಯಕ್ರಮ ಆಯೋಜಿಸಿ, ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಗಳಿಕೆಯಲ್ಲಿ ಒಂದು ಭಾಗವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಉಳಿತಾಯ ಮಾಡಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಹೂಡಿಕೆ ಮಾಡಿ ತಮ್ಮ ಆರ್ಥಿಕ ಬಲವರ್ಧನೆ ಸಾಧಿಸ ಬೇಕೆಂದು ತಿಳಿಸಿದರು.ವಿದ್ಯಾರ್ಥಿಗಳಾದ ಶ್ರಾವ್ಯ, ಶ್ರೇಯಾ ಮತ್ತು ರೇವತಿ ಪ್ರಾರ್ಥನೆ ಮಾಡಿ, ಸಂಗೀತ ಸ್ವಾಗತ ಕೋರಿದರು. ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.