ಕೊಡಿಯಾಲ- ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಸಾರಕರೆ ಎಂಬಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಈಗ ಸಂಪೂರ್ಣ ಶಿಥಿಲಗೊಂಡಿದ್ದು ಸದ್ರಿ ಅಣೆಕಟ್ಟಿಗೆ ಮೇಲೆ ಮಳೆಗಾಲದಲ್ಲಿ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವುದು ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಿಗೆ ಕೊಡಿಯಾಲ ಆನೆ ಗುರಿ ,ಬೇರ್ಯ, ಉಡುಕಿರಿ ಕಾಲೋಣಿ, ಕೆಡಿಂಜಿಮೊಗ್ರು , ಸಾರೆಕರೆ ನಾಗರಿಕರು ಹಾಗೂ ಪೆರುವಾಜೆ ನಾಗರಿಕರು ಈ ಕಿಂಡಿ ಅಣೆಕಟ್ಟನ್ನು ಅವಲಿಂಬಿಸಿದ್ದಾರೆ.
ಈ ಅಣೆಕಟ್ಟು ಕೊಡಿಯಾಲ ಗ್ರಾಮ ಮತ್ತು ಪೆರುವಾಜಿ ಗ್ರಾಮದ ಸಂಪರ್ಕ ಕೊಂಡಿಯಾಗಿದ್ದು ಮಳೆಗಾಲದಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತದೆ ಮತ್ತು ಕೃಷಿ ಪ್ರದೇಶಗಳು ಮುಳುಗಡೆಯಾಗುತ್ತದೆ. ಇದರಿಂದ ಈ ಭಾಗದ ಜನರು ತುಂಬಾ ಸಂಕಷ್ಟ ಅನುಭವಿಸುತ್ತಾರೆ.
ಅನಾರೋಗ್ಯ ಪೀಡಿತರಿದ್ದರೆ ಅವರನ್ನು ಇದರ ಮೇಲೆ ಹೊತ್ತುಕೊಂಡು ಹೋಗಬೇಕಾಗುತ್ತದೆ .ಮಳೆಗಾಲದಲ್ಲಿ ಅಣೆಕಟ್ಟಿನ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿ ಜನರು ತುಂಬಾ ದೂರದವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಈ ಭಾಗದ ಜನರ ಪಾಡು ತುಂಬಾ ದುಸ್ತರವಾಗುತ್ತದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ನೀಡಿದರು. ಯಾವುದೇ ಪ್ರಯೋಜನವಾಗಲಿಲ್ಲ ಈ ಕಿಂಡಿ ಅಣೆಕಟ್ಟು ಕೊಡಿಯಾಲ ಮತ್ತು ಪೆರುವಾಜೆ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟದ್ದು ಆದಷ್ಟು ಬೇಗ ಮೇಲ್ದರ್ಜೆ ಸೇರಿಸಿ ಸರ್ವಋತು ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಈ ಭಾಗದ ಸಾರ್ವಜನಿಕರ ಬೇಡಿಕೆ.