ಸುಳ್ಯ ಎನ್.ಎಂ.ಸಿ.ಯಲ್ಲಿ ಉದ್ಯೋಗ ಮೇಳ – ಎನ್.ಎಂ.ಸಿ. ಟಾಲೆಂಟ್ ಹೈರ್ 2K24

0

ಸುಳ್ಯದ ಎನ್.ಎಂ.ಸಿ.ಯಲ್ಲಿ ವಿವಿಧ ಕಂಪನಿಗಳಿಂದ ಪದವಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ – ಎನ್.ಎಂ.ಸಿ. ಟಾಲೆಂಟ್ ಹೈರ್ 2K24 ಮೇ. 28ರಂದು ನಡೆಯಿತು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬದುಕಬೇಕಾದರೆ ಒಂದಲ್ಲಾ ಒಂದು ಉದ್ಯೋಗದ ಅವಶ್ಯಕತೆ ಇದೆ.

ಬಂದಿರುವ ಕಂಪನಿಗಳು ಸಣ್ಣದು ದೊಡ್ಡದು ಎನ್ನುವಂತ ಕೀಳರಿಮೆ ಬೇಡ ಎಂದು ಹೇಳಿ ಶುಭ ಹಾರೈಸಿದರು. ಎನ್.ಎಂ.ಸಿ. ಅಕಾಡೆಮಿಕ್ ಅಡ್ವೈಸರ್ ಪ್ರೊ. ಎಂ. ಬಾಲಚಂದ್ರ ಗೌಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ಡಾ. ಮಮತಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಪ್ಲೇಸ್ ಮೆಂಟ್ ಅಧಿಕಾರಿ ಶ್ರೀಮತಿ ಭವ್ಯ ಜಿ ವಂದಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಕು. ತುಳಸಿ ಪ್ರಾರ್ಥಿಸಿದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಕು. ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಸುಮಾರು 25ಕ್ಕೂ ಮಿಕ್ಕಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.