ಅನ್ಸಾರಿಯಾದಲ್ಲಿ ಹಿಜಾಮ ಕ್ಯಾಂಪ್

0


ಅನ್ಸಾರಿಯ ದಅವಾ ಕಾಲೇಜು ಇದರ ಪಂಚವಾರ್ಷಿಕ ಭಾಗವಾಗಿ ಹಮ್ಮಿಕೊಂಡಿದ್ದ ಪ್ರಾಚೀನ ಕಾಲದ ವೈದ್ಯ ಪದ್ದತಿಯಾದ ಮತ್ತು ಉತ್ತಮ ಆರೋಗ್ಯಕ್ಕೆ ಪೂರಕವಾದ ಹಿಜಾಮ ಮೊದಲ ಹಂತದ ಕ್ಯಾಂಪ್ ಅತ್ಯಂತ ಯಶಸ್ವಿಯಾಗಿ ಅನ್ಸಾರಿಯಾ ಸಭಾಂಗಣದಲ್ಲಿ ನಡೆಯಿತು.ಹಿಜಾಮ ಕಾರ್ಯಕ್ರಮನ್ನು ಕಾರುಣ್ಯ ಹಿಜಾಮ & ಹೀಲಿಂಗ್ ಲೈಫ್ ಇವರ ಸಹಭಾಗಿತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ಅಧ್ಯಕ್ಷರಾದ ಹಾಜಿ ಅಬ್ದುಲ್‌ ಮಜೀದ್ ಜನತಾ ವಹಿಸಿದರು.


ಅನ್ಸಾರಿಯ ದಅವಾ ಪ್ರಾಂಶುಪಾಲರಾದ ಅಬೂಬಕ್ಕರ್ ಹಿಮಮಿ ಸಖಾಫಿ ದುವಾಶಿರ್ವಚನ ಮಾಡಿದರು.
ನೂರಾರು ಮಂದಿ ಭಾಗಿಯಾಗಿ ಇದರ ಪ್ರಯೋಜನವನ್ನು ಪಡೆದು ಕೊಂಡರು.ಎರಡನೇಯ ಹಂತದ ಹಿಜಾಮ ಶಿಬಿರವನ್ನು ಜೂನ್ 03 ಸೋಮವಾರದಂದು ನಡೆಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಸ್ತಫಾ ಹಾಜಿ ಜನತಾ ಶುಭ ಹಾರೈಸಿದರು.ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಉಪಾಧ್ಯಕ್ಷ ಎಸ್ ಪಿ ಅಬೂಬಕ್ಕರ್, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ ನಿರ್ದೇಶಕರಾದ ಸಿದ್ದೀಕ್ ಕೋಕೋ,ಸಿದ್ದೀಕ್ ಕಟ್ಟೆಕ್ಕಾರ್,ಹಮೀದ್ ಬೀಜಕೊಚ್ಚಿ,ರಿಯಾಝ್ ಕಟ್ಟೆಕ್ಕಾರ್, ಶುಕೂರ್ ಹಾಜಿ, ಶೆರೀಫ್ ಸುದ್ದಿ ,ಶಾಫಿ ಕುತ್ತಮೊಟ್ಟೆ ಶರೀಫ್ ಕಂಠಿ, ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್ ಮತ್ತಿತರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.