ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆಯಲ್ಲಿ ಶಾಲಾ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು. ಶಾಲಾ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದನಗಳ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶ್ರಫ್ ವಹಿಸಿದ್ದರು. ವೇದಿಕೆಯಲ್ಲಿ ಸಿಆರ್‌ಪಿ ಚಂದ್ರಶೇಖರ ಗುಡ್ಡೆಮನೆ, ಶಿಕ್ಷಕರಾದ ಜಯಲಕ್ಷ್ಮಿ, ಭಾಗೀರಥಿ ವನಿತಾ ಮಣಿ, ಮೀನಾಕ್ಷಿ, ಚಂದ್ರಶೇಖರ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶೋಕ್ ಪೀಚೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಾವಸ್ತ್ರ ಹಾಗೂ ಪುಸ್ತಕ ವಿತರಣ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸೇವೆಯಿಂದ ನಿವೃತ್ತಗೊಂಡಿರುವ ಮುಖ್ಯ ಶಿಕ್ಷಕಿ ಡೈಸಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆದು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ನಿವೃತ್ತಿ ಗೊಂಡಿರುವ ಮುಖ್ಯ ಶಿಕ್ಷಕಿಯವರಿಗೆ ಶಾಲುಹೊದಿಸಿ ಫಲಪುಷ್ಪವನ್ನು ನೀಡಿ ಗೌರವಿಸಿ ಸನ್ಮಾನಿಸಿ ಬಿಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕ್ಷೇತ್ರದ ಸಂಪನ್ಮೂಲ ಕೇಂದ್ರದ ಪ್ರಸಾದ್ ಡಿ.ಎಸ್, ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪಿ.ವಿ, ಉಪಾಧ್ಯಕ್ಷ ರಾಜು ಹೆಚ್ ಆರ್, ಪೆರಾಜೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಜಿ.ವಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉನೈಸ್ ಪೆರಾಜೆ, ಉಪಾಧ್ಯಕ್ಷ ಅಶೋಕ್ ಪೀಚೆ, ಹಿರಿಯರಾದ ಕ್ಸೇವಿಯರ್, ಶಿಕ್ಷಕ ವೃಂದದವರು, ಬಿಸಿಯೂಟದ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.