ಮುರುಳ್ಯ ಅಲೆಕ್ಕಾಡಿ ಸ . ಹಿ. ಪ್ರಾ. ಶಾಲಾ ಪ್ರಾರಂಭೋತ್ಸವ

0

ಸ . ಹಿ. ಪ್ರಾ. ಶಾಲೆ, ಮುರುಳ್ಯ ಅಲೆಕ್ಕಾಡಿ ಇಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣ ರಂಗೋಲಿ ಹಾಕಿ ಶೃಂಗರಿಸಲಾಗಿದ್ದು, ಹೊಸದಾಗಿ ಶಾಲೆಗೆ ಸೇರಿದ ಮಕ್ಕಳನ್ನು ಹೂಗುಚ್ಚ ಮತ್ತು ಬಲೂನು ,ಸಿಹಿ ತಿಂಡಿ ನೀಡಿ ಎಲ್ಲರೂ ಸೇರಿ ಬಹಳ ಉತ್ಸಾಹದಿಂದ ಶಾಲೆಗೆ ಬರಮಾಡಿಕೊಳ್ಳಲಾಯಿತು. ಶಾಲಾ ಪ್ರಾರ್ಥನೆಯ ಬಳಿಕ SDMC ಅಧ್ಯಕ್ಷರಾದ ಅವಿನಾಶ್ ಡಿ ಇವರು ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿ ಎಲ್ಲರಿಗೂ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ,ಮಧು ಯತೀಶ್ ಹಾಗೂ ಮಕ್ಕಳ ಮನೆ ಉಪಾಧ್ಯಕ್ಷರಾದ ಐತಪ್ಪ ಯು ಇವರು ಸಂದರ್ಭೋಚಿತವಾಗಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು .

ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದು ಶಿಕ್ಷಕರು ಮಕ್ಕಳು,ಅಡುಗೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯನ್ನು ದತ್ತು ಸ್ವೀಕರಿಸಿದ ಯತೀಶ್ ಪಾಲೋಳಿ ಮತ್ತು ಮನೆಯವರು ಎಲ್ಲರಿಗೂ ಸಿಹಿ ತಿಂಡಿ ಒದಗಿಸಿದ್ದರು