ದೇವಚಳ್ಳ ಶಾಲಾ ಪ್ರಾರಂಭೋತ್ಸವ

0

ದೇವಚಳ್ಳ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ವು ಮೇ.31ರಂದು ನಡೆಯಿತು.

ಶಾಲಾ ಮಕ್ಕಳನ್ನು ಬ್ಯಾಂಡ್ ವಾಳಗದ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ಅಲ್ಲದೇ ಶಾಲಾ ಪ್ರವೇಶದ್ವಾರಕ್ಕೆ ತಳಿರುತೋರಣಗಳಿಂದ ಸಿಂಗರಿಸಲಾಯಿತು.

ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ.ರವರು, ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಪಟ್ಟೆ, ಉಪಾಧ್ಯಕ್ಷೆ ಸವಿತಾ ಹಾಗೂ ಶಿಕ್ಷಕ ವೃಂದದವರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಇದೇ ದಿನ ಯುಕೆಜಿಯ ಚಶ್ಮ ಮತ್ತು ಚಶ್ಮಿತ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಕ್ಷರ ದಾಸೋಹಕ್ಕೆ ಪಾಯಸವನ್ನು ನೀಡಿದರು.