ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ಮಹಿಳಾ ನೈರ್ಮಲ್ಯ ದಿನದ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ನೈರ್ಮಲ್ಯ ವಾರವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಶ್ಮಿ ಕೆ ಎಸ್ ರವರು
ಋತುಸ್ರಾವ, ವಿವಿಧ ಸ್ಯಾನಿಟರಿ ಉತ್ಪನ್ನಗಳು, ಮುಟ್ಟಿನ ಸಮಯದಲ್ಲಿ ಮಹಿಳೆಯರ ವೈಯಕ್ತಿಕ ನೈರ್ಮಲ್ಯ ಹಾಗೂ ಈ ಸಮಯದಲ್ಲಿ ಸೇವಿಸಬೇಕಾದಂತಹ ಪೋಷಕಾಂಶಯುಕ್ತ ಆಹಾರದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮವನ್ನು ಕುಮಾರಿ ಚಿನ್ಮಯಿ, ಕಾವ್ಯ ಗೌಡ, ಲಕ್ಷ್ಮಿ ಹಾಗೂ ಮೀನಾಕ್ಷಿ ಪ್ರಾರ್ಥಿಸಿದರು.
ಕುಮಾರಿ ಸ್ನೇಹ ಕೆ ಸಿ ಸ್ವಾಗತಿಸಿ, ಕುಮಾರಿ ಸ್ವಾತಿ ಆರ್ ಎನ್ ವಂದಿಸಿದರು.
ಸಂಪತ್ ಎಸ್ ಹೆಚ್ ಹಾಗೂ ಕುಮಾರಿ ದೀಕ್ಷಿತ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ಎನ್.ಎಸ್. ಎಸ್ ಎಸ್. ಘಟಕದ ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ., ಹಾಗೂ ಸಂಸ್ಥೆಯ ಭೋಧಕ, ಭೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಹಾಗೂ ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.