ತೊಡಿಕಾನ: ಅಡ್ಯಡ್ಕದಲ್ಲಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ

0

ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಜೂ.1ರಂದು ಸಂಜೆ ಸಂಭವಿಸಿದೆ.

ಅಡ್ಯಡ್ಕ ನಿವಾಸಿ ಬಂಬ ಬೆಳ್ಚಪ್ಪಾಡ ಅವರು ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನಾರಾಯಣಿ, ಪುತ್ರರಾದ ರಾಘವ, ಕುಂಞಿರಾಮ, ಕಿಟ್ಟು, ಪುತ್ರಿಯರಾದ ಬಾಲಕಿ, ದೇವಕಿ, ಸುಗಂಧಿ, ಜಾನಕಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.