ಹಿಮಾಯತುಲ್ ಇಸ್ಲಾಂ ಜಮಾಅತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಗೂನಡ್ಕ, ಉಪಾಧ್ಯಕ್ಷರಾಗಿ ಉಮ್ಮರ್ ಪುತ್ರಿ,
ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ.ಅಶ್ರಫ್ ದೊಡ್ಡಡ್ಡ, ಖಜಾಂಜಿಯಾಗಿ ಕುಂಭಕೋಡ್ ಅಬ್ದುಲ್ ಖಾದರ್ ಗೂನಡ್ಕ, ಕಾರ್ಯದರ್ಶಿಯಾಗಿ ಅಝರುದ್ದೀನ್ ಸಿ.ಎ, ಸಹ ಕಾರ್ಯದರ್ಶಿಯಾಗಿ ಸಿದ್ದೀಕ್ ಬಿ.ಎಂ. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಿರ್ದೇಶಕರಾಗಿ ಡಿ.ಆರ್.ಅಬ್ದುಲ್ ಖಾದರ್,
ಎಸ್.ಎಂ.ಅಬ್ದುಲ್ಲ, ಪಿ.ಕೆ.ಅಬೂಶಾಲಿ.
ಎಂ.ಬಿ.ಮುನೀರ್,
ಕೆ.ಎಸ್.ಹಾರಿಸ್ ಇವರುಗಳು ಆಯ್ಕೆಯಾದರು.
ಜಮಾಅತಿನ ಖತೀಬರಾದ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ, ನಿಕಟಪೂರ್ವ ಅಧ್ಯಕ್ಷರುಗಳಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಎಂ.ಬಿ.ಇಬ್ರಾಹಿಂ, ಹಾಜಿ ಅಬ್ದುಲ್ಲ ಕೊಪ್ಪದಕಜೆಯವರು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.
ಜಮಾಅತ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ. 24 ರಂದು ಶುಕ್ರವಾರ ಗೂನಡ್ಕದ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರಗಿತು. ಜಮಾಅತಿನ ಅಧ್ಯಕ್ಷರಾದ ಡಿ.ಆರ್.ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಮೇಲ್ಕಂಡ ಸಮಿತಿಯನ್ನು ರಚಿಸಲಾಯಿತು.
ದಿನಾಂಕ 31-5-2೦24 ನೇ ಶುಕ್ರವಾರ ಕಾರ್ಯಕಾರಿ ಸಮಿತಿಯ ತುರ್ತು ಸಭೆಯನ್ನು ಕರೆದು ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಜಮಾಅತ್ ಖತೀಬರಾದ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿಯವರು ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮ್ಮರ್ ಪುತ್ರಿಯವರು ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿಯಾಗಿದ್ದ ಎಸ್.ಎ.ಅಶ್ರಫ್ ದೊಡ್ಡಡ್ಕರವರು ವರದಿ ವಾಚಿಸಿದರು.
ಕೋಶಾಧಿಕಾರಿಯಾಗಿದ್ದ ಲತೀಫ್ ಸಖಾಫಿಯವರು ಲೆಕ್ಕ ಪತ್ರ ಮಂಡಿಸಿದರು. ಸ್ವಲಾತ್ ನೊಂದಿಗೆ ಸಭೆ ಮುಕ್ತಾಯವಾಯಿತು.