ಕಾಯರ್ತೋಡಿ ಅಂಗನವಾಡಿ ಸಹಾಯಕಿ ಶ್ರೀಮತಿ ಲೀಲಾವತಿ ಜೆ. ಶೆಟ್ಟಿ ನಿವೃತ್ತಿ

0

ಸುಳ್ಯದ ಕಾಯರ್ತೋಡಿ ಅಂಗನವಾಡಿ ಸಹಾಯಕಿ ಲೀಲಾವತಿ ಜೆ. ಶೆಟ್ಟಿ ಅವರು ತಮ್ಮ 18 ವರ್ಷಗಳ ಸುದೀರ್ಘ ಸೇವೆಯಿಂದ ಮೇ 31ರಂದು ನಿವೃತಿ ಹೊಂದಿದ್ದಾರೆ.


ಶ್ರೀಮತಿ ಲೀಲಾವತಿ ಅವರು ಕಾಯರ್ತೋಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕರಾಗಿ ಸುಮಾರು 18 ವರ್ಷ 1 ತಿಂಗಳು ಸೇವೆಗೈದಿದ್ದು, ಕಾಯರ್ತೋಡಿಯ ಶ್ರೀನಿಧಿ ಮಹಿಳಾ ಮಂಡಳಿಯ ಸದಸ್ಯರಾಗಿ ಸೂರ್ತಿಲ ಶ್ರೀ ರಕ್ತೇಶ್ವರಿ ಸಮಿತಿಯ ಸದಸ್ಯರಾಗಿ ಶ್ರೀ ರಕ್ತೇಶ್ವರಿ ಭಜನಾ ಮಂಡಳಿಯ ಸದಸ್ಯರಾಗಿ ದುಡಿದಿದ್ದಾರೆ.


ಇವರ ಪತಿ ಜಗನ್ನಾಥ ಶೆಟ್ಟಿಯವರು ಮೇಸ್ತ್ರಿಯಾಗಿದ್ದು, ಪುತ್ರ ದೀಪಕ್ ಉಜಿರೆಯಲ್ಲಿ ಉದ್ಯೋಗಿಯಾಗಿದ್ದಾರೆ, ಪುತ್ರಿ ಶ್ರೀಮತಿ ಅಕ್ಷತಾ ಅವರು ಮಂಗಳೂರಿನ ಶಾರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.