ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯದ ನೂತನ ಮೇಲ್ವಿಚಾರಕರಾಗಿ ಗಂಗಾಧರರವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ವು ಜೂ.3 ರಂದು ಅರಂತೋಡು ಸೇವಾ ಕೇಂದ್ರ ದಲ್ಲಿ ನಡೆಯಿತು.
ಸಂಪಾಜೆ ವಲಯದಲ್ಲಿ ಈ ಹಿಂದೆ ಒಂದು ವರ್ಷಗಳಿಂದ ಶ್ರೀಮತಿ ಜಯಶ್ರೀ ರವರು ಮೇಲ್ವಿಚಾರಕ ಕರ್ತವ್ಯದಲ್ಲಿದ್ದು ಇದೀಗ ಸುಳ್ಯ ವಲಯಕ್ಕೆ ವರ್ಗಾವಣೆ ಗೊಂಡಿದ್ದು ಸಂಪಾಜೆ ವಲಯಕ್ಕೆ ನೂತನ ಮೇಲ್ವಿಚಾರಕರಾಗಿ ಗಂಗಾಧರ ರವರು ಜವಾಬ್ದಾರಿಯನ್ನು ವಹಿಸಿಕೊಂಡರು.