ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಗೂನಡ್ಕ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ‘ಹಸಿರೇ ಉಸಿರು’ ಎಂಬ ಧ್ಯೇಯದೊಂದಿಗೆ ಗೂನಡ್ಕ ಮಸೀದಿ ಮತ್ತು ದರ್ಖಾಸ್ ಅಂಗನವಾಡಿ ಪರಿಸರ ಶುಚಿತ್ವ ಮತ್ತು ಸಸಿಗಳು ನೆಡುವ ಮೂಲಕ ಆಚರಿಸಲಾಯಿತು.
ಎಸ್ ವೈ ಎಸ್ ಗೂನಡ್ಕ ಅಧ್ಯಕ್ಷ ಹನೀಫ್ ಝೈನಿ ನೇತೃತ್ವ ವಹಿಸಿ, ಬದ್ರಿಯಾ ಜುಮಾ ಮಸೀದಿ ಗೂನಡ್ಕ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಚಾಲನೆ ನೀಡಿದರು. ಖತೀಬ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಶುಭ ಹಾರೈಸಿದರು. ಜಮಾಅತ್ ಉಪಾಧ್ಯಕ್ಷ ಉಮ್ಮರ್ ಪುತ್ರಿ ,ಪ್ರ ಕಾರ್ಯದರ್ಶಿ ಅಶ್ರಫ್ ಏ ಟಿ,ಪೂರ್ವಾಧ್ಯಕ್ಷ ಡಿ ಆರ್ ಖಾದರ್,ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಸುಳ್ಯ,ಎಸ್ ವೈ ಎಸ್ ಸುಳ್ಯ ಸರ್ಕಲ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ,ಎಸ್ ವೈ ಎಸ್ ಗೂನಡ್ಕ ಕಾರ್ಯದರ್ಶಿ ಹಾರಿಸ್ ಝಂ ಝಂ,ಕಾರ್ಯಕರ್ತರಾದ ಅಬೂಬಕ್ಕರ್ ಸಿದ್ದೀಕ್,ಜಾಬಿರ್ ಎಂ ಬಿ,ಅಝರ್,ಇಬ್ರಾಹಿಂ,ಬಶೀರ್,ಸಲಾಂ ಹಾಗೂ ದರ್ಖಾಸ್ ಅಂಗನವಾಡಿ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷಿತಾ ಶಿವಕುಮಾರ್ ಸಮುದಾಯ ಆರೋಗ್ಯ ಅಧಿಕಾರಿ , ಆಶಾ ಎಂ ಕೆ ಆಶಾ ಕಾರ್ಯಕರ್ತೆ, ಶಾರದಾ ಅಂಗನವಾಡಿ ಕಾರ್ಯಕರ್ತೆ ರೋಹಿಣಿ ಅಂಗನವಾಡಿ ಸಹಾಯಕಿ, ಪೋಷಕರಾದ ಮಮತಾ ಮಣಿ, ಇರ್ಫಾನ, ನಿಶಾನ ಮೊದಲಾದವರು ಉಪಸ್ಥಿತರಿದ್ದರು.