ಸುಣ್ಣ ಬಣ್ಣಗಳಿಂದ ಸುಂದರ ಭವನವಾಗಿ ಮಾರ್ಪಡುತ್ತಿರುವ ಕಟ್ಟಡ
ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿರುವ ಮೀನು ಮಾರುಕಟ್ಟೆ ಕಟ್ಟಡ ಸುಣ್ಣ ಬಣ್ಣಗಳಿಂದ ಕೆಲಸ ಕಾರ್ಯ ನಡೆಯುತ್ತಿದ್ದು, ರಿಪೇರಿ ಕಾರ್ಯಗಳು ಭರದಿಂದ ಸಾಗುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಈ ಕಟ್ಟಡದ ಅವ್ಯವಸ್ಥೆಯ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ನಡೆಯುತ್ತಿತ್ತು. ಇದೀಗ ಅದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಸುಸಜ್ಜಿತ ಮಾರುಕಟ್ಟೆಯ ಸ್ವಚ್ಛತೆಯನ್ನು ಮಾಡುವಲ್ಲಿ ರಿಪೇರಿ ಕಾರ್ಯವನ್ನು ಮಾಡುತ್ತಿದ್ದಾರೆ.
ಮಾರುಕಟ್ಟೆಯ ಶೌಚಾಲಯ, ವೇಸ್ಟ್ ನೀರು ಹೋಗಲು ಉತ್ತಮ ವ್ಯವಸ್ಥೆ, ನೂತನ ಕಾಂಪೌಂಡ್ ರಚನೆ ಮುಂತಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಪರಿಸರ ಸ್ವಚ್ಛತೆಗೊಂಡಿದೆ.
೨೦೧೫ರಲ್ಲಿ ಸುಮಾರು ೬೮ ಲಕ್ಷ ರೂಗಳಿಂದ ನಿರ್ಮಾಣವಾದ ಈ ಮಾರುಕಟ್ಟೆ ಕಳೆದ ಕೆಲವು ವರ್ಷಗಳಿಂದ ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟು ಸ್ಥಳೀಯ ವ್ಯಾಪಾರಸ್ಥರಿಗೆ ಇದರಿಂದ ಬೇರೆ ಬೇರೆ ಸಮಸ್ಯೆಗಳು ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಎಂಟು ವರ್ಷಗಳ ಬಳಿಕ ಕಟ್ಟಡದ ದುರಸ್ತಿ ಕೆಲಸ ಕಾರ್ಯ ಆರಂಭಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಸ್ಥರು ಮತ್ತು ಮೀನು ಮಾರುಕಟ್ಟೆಯ ವ್ಯಾಪಾರಿಗಳು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.