ರಂಗ ಮಯೂರಿ ಕಲಾಶಾಲೆಯಲ್ಲಿ ಕಲಾ ತರಗತಿಗಳು ಪುನರಾರಂಭ
ಸುಳ್ಯದ ಹೃದಯಭಾಗದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಆರು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತ ಸಾಂಸ್ಕೃತಿಕ ಸಂಸ್ಥೆ ರಂಗ ಮಯೂರಿ ಕಲಾಶಾಲೆಯಲ್ಲಿ ಕಲಾ ತರಗತಿಗಳು ಪುನರಾರಂಭಗೊಂಡಿವೆ.
ರಾಜ್ಯದ ಹೆಸರಾಂತ ಕಲಾಶಿಕ್ಷಕರಿಂದ ತರಬೇತಿ ಮತ್ತು ಮಾರ್ಗದರ್ಶನ ಹೊಂದಿರುವ ಕಲಾಶಾಲೆಯಲ್ಲಿ
ವೆಸ್ಟರ್ನ್ ಡ್ಯಾನ್ಸ್, ಸೆಮಿಕ್ಲಾಸಿಕಲ್ ಡ್ಯಾನ್ಸ್, ಸುಗಮ ಸಂಗೀತ,ಶಾಸ್ತ್ರೀಯ ಸಂಗೀತ,ಡ್ರಾಯಿಂಗ್, ಕೀಬೋರ್ಡ್, ಹಾಗು ಅಭಿನಯ ತರಗತಿಗಳು ಆರಂಭಗೊಂಡಿವೆ.
ಐದು ವರ್ಷ ನಂತರದ ಎಲ್ಲಾ ವಯೋಮಾನದವರು ಕಲಾ ತರಗತಿಗಳ ಹೊಸ ಬ್ಯಾಚ್ ಗೆ ನೋಂದಾವಣೆ ಮಾಡಿಕೊಳ್ಳಬಹುದು.
ಅಲ್ಲದೇ ಕಲಾಶಾಲೆಯಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೆ ವೇದಿಕೆ ಯನ್ನು ಕಲ್ಪಿಸಿಕೊಟ್ಟು ಕಲಿತ ಕಲಾಪ್ರಕಾರಗಳ ಪ್ರದರ್ಶನಕ್ಕೆ ಅವಕಾಶವಿರುತ್ತದೆ.
ಮತ್ತು ರಂಗ ಮಯೂರಿ ಕಲಾ ತಂಡ ದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಕ್ತಿತ್ವ ವಿಕಸನದ ಪಾಠಗಳು ನಡೆಯುತ್ತವೆ.
ಸಭೆ ಸಮಾರಂಭಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,ವೇಷಭೂಷಣ ಸಾಂಸ್ಕೃತಿಕ ಪರಿಕರಗಳು ರಂಗ ಮಯೂರಿಯಲ್ಲಿ ದೊರೆಯುತ್ತದೆ.