ಆಲೆಟ್ಟಿ: ಶ್ರೀ ದೇವಿಯ ಶಕ್ತಿ ಪೂಜೆ- ಭಜನಾ ಕಾರ್ಯಕ್ರಮ

0

ಆಲೆಟ್ಟಿಯ ವಿಷ್ಣುಮೂರ್ತಿ ದೈವದ ದರ್ಶನ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ಮನೆಯಲ್ಲಿ ವರ್ಷಂಪ್ರತಿ ಜರುಗುವ ಶ್ರೀ ದೇವಿಯ ಶಕ್ತಿ ಪೂಜೆಯು ಜೂ.8 ರಂದು ನಡೆಯಿತು.
ಸಂಜೆ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಯಿತು. ರಾತ್ರಿ ಅಪ್ಪಯ್ಯ ಮಣಿಯಾಣಿ ಯವರ ನೇತೃತ್ವದಲ್ಲಿ ಶಕ್ತಿ ಪೂಜೆಯಾಗಿ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು. ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಭಾಗವಹಿಸಿದರು.