ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಾರೀ ಸಂಖ್ಯೆಯ ಭಕ್ತರು ಜೂ.9 ರಂದು ಆಗಮಿಸಿದ್ದರು.
ಎರಡು ದಿನಗಳ ಸರಣಿ ರಜೆ ಹಿನ್ನಲೆಯಲ್ಲಿ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಕ್ಷೇತ್ರದ ಒಳಾಂಗಣ, ಪೇಟೆಯಲ್ಲಿ ಅಧಿಕ ಸಂಖ್ಯೆಯ ಭಕ್ತರ ಓಡಾಟ ಕಂಡುಬAದಿತ್ತು. ಪೇಟೆಯ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ಭರ್ತಿಯಾಗಿ ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ನಡೆಸಲಾಗಿತ್ತು. ಸರಕಾರಿ ಬಸ್ ಮೂಲಕವೂ ಅಧಿಕ ಭಕ್ತರು ಆಗಮಿಸಿದ್ದರು. ನಿಲ್ದಾಣದಲ್ಲೂ ಪ್ರಯಾಣಿಕರ ದಟ್ಟಣೆ ಕಂಡುಬಂದಿತ್ತು.
ರಥ ಬೀದಿಯಿಂದಲೇ ದೇವರ ದರ್ಶನ ಹಾಗೂ ಭೋಜನ ಪ್ರಸಾದಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಖಾಸಗಿ ವಾಹನ ಸೇರಿದಂತೆ ವಾಹನಗಳ ಓಡಾಟ ಅಧಿಕವಾಗಿತ್ತು. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿ ಸಂಚರಿಸುತ್ತಿರುವುದು ಕಂಡುಬಂದಿತ್ತು.