2024- 25ನೇ ಶೈಕ್ಷಣಿಕ ಸಾಲಿಗೆ ಸ.ಉ.ಹಿ.ಪ್ರಾ ಶಾಲೆ ಮುರುಳ್ಯ ಇದರ ಶಾಲಾ ಮಂತ್ರಿಮಂಡಲವನ್ನು ಮತದಾನ ಮಾಡುವುದರ ಮೂಲಕ ರಚನೆ ಮಾಡಲಾಯಿತು.
ಮುಖ್ಯಮಂತ್ರಿಯಾಗಿ ಪೂರ್ವಜ್ 7ನೇ ಉಪಮುಖ್ಯಮಂತ್ರಿಯಾಗಿ ಪಿ. ತನೀಷಾ 7ನೇ ಆಯ್ಕೆಯಾದರೂ.
ಇದರ ಜೊತೆಗೆ ಗೃಹಮಂತ್ರಿಯಾಗಿ ಶ್ರವಣ್, ಆರೋಗ್ಯ ಮಂತ್ರಿಯಾಗಿ ನಿತೇಶ್ .ಪಿ, ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ವಿಸ್ಮಿತಾ, ಗ್ರಂಥಾಲಯ ಮತ್ತು ವಾರ್ತ ಮಂತ್ರಿಯಾಗಿ ನಿಧಿಶ್ರೀ, ಸಾಂಸ್ಕೃತಿಕ ಮಂತ್ರಿಯಾಗಿ ಯಶ್ವಿತ್ .ಕೆ.ಸಿ, ತೋಟಗಾರಿಕಾ ಮಂತ್ರಿಯಾಗಿ ಶಿಶಿಲ್ ಕೆ.ಪಿ, ಕ್ರೀಡಾ ಮಂತ್ರಿಯಾಗಿ ಕೃತಿಕ್ ಕೆ.ಜೆ, ಸ್ವಚ್ಛತಾ ಮಂತ್ರಿಯಾಗಿ ಯಶ್ವಿನ್ ಕೆ. ಸಿ, ನೀರಾವರಿ ಮಂತ್ರಿಯಾಗಿ ಮುಹಮ್ಮದ್ ಶಾದಿನ್, ಆಹಾರ ಮಂತ್ರಿಯಾಗಿ ಅಹಮ್ಮದ್ ಮುರ್ಷಿದ್, ಸಭಾಪತಿಯಾಗಿ ತೃಪ್ತಿ ,ವಿರೋಧ ತಕ್ಕದ ನಾಯಕನಾಗಿ ಮುಹಮ್ಮದ್ ರಿಫಾಝ್ ಆಯ್ಕೆಯಾದರು.
ಜೊತೆಗೆ ವಿದ್ಯಾರ್ಥಿಗಳಿಗೆ ಮಂತ್ರಿಮಂಡಲದ ಕುರಿತು ಆಯ್ಕೆಯಾದ ಮಂತ್ರಿಗಳಿಗೆ ಮುಖ್ಯ ಗುರುಗಳಾದ ಶಶಿಕಲಾ ಇವರು ಪ್ರಮಾಣ ವಚನ ಬೋಧಿಸಿದರು. ಹಾಗೂ ಅವರವರ ಕರ್ತವ್ಯ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು . ಈ ಸಮಯದಲ್ಲಿ ಎಲ್ಲಾ ಶಿಕ್ಷಕ ವೃಂದದವರ ಸಹಕರಿಸಿದರು.