ಸಾಯಿಶ್ರುತಿ ಪಿಲಿಕಜೆ ಮಿಸ್ ಕೋಸ್ಟಲ್ 2024 ಪ್ರಥಮ ರನ್ನರ್ ಅಪ್

0

ಖ್ಯಾತ ಧ್ವನಿ ಮಾಯೆ ಕಲಾವಿದೆ , ಸುಳ್ಯದ ಸಾಯಿಶ್ರುತಿ ಪಿಲಿಕಜೆ ಯವರು ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮತ್ತು ಅಭರಣ ಜ್ಯುವೆಲರ್ಸ್ ಪ್ರಾಯೋಜಕತ್ವದಲ್ಲಿ , TSR ಮಾಡೆಲಿಂಗ್ ಮ್ಯಾನೇಜ್‌ಮೆಂಟ್ ಆಯೋಜಿಸಿರುವ ಉಡುಪಿಯ ಮೊಟ್ಟ ಮೊದಲ ಸೌಂದರ್ಯ ಸ್ಪರ್ಧೆ ” ಟೀನ್-ಮಿಸ್-ಮಿಸೆಸ್ ಕೋಸ್ಟಲ್ 2024″ ನಲ್ಲಿ ಮಿಸ್ ಕೋಸ್ಟಲ್ ನ ಪ್ರಥಮ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾರೆ , ಜೊತೆಗೆ “ಮಿಸ್ ಟ್ಯಾಲೆಂಟೆಡ್ ಕ್ವೀನ್” ಸಬ್ ಟೈಟಲ್ ವಿಜೇತರಾಗಿದ್ದಾರೆ.

ಸುಳ್ಯದ ಅಮರಪಡ್ನೂರು ಗ್ರಾಮದ ಶಿವಸಾಯಿ ಭಟ್ ಮತ್ತು ಸುಜ್ಯೋತಿ ದಂಪತಿಗಳ ಪುತ್ರಿಯಾಗಿರವ ಸಾಯಿಶ್ರುತಿ ಬೆಂಗಳೂರಿನಲ್ಲಿ ಜೋಯ್ ಆಲುಕ್ಕಾಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಅಪರೂಪದ ಧ್ವನಿ ಮಾಯೆ ಕಲಾವಿದೆಯಾಗಿ ಪ್ರಸಿದ್ಧಿ ಪಡೆಯುತ್ತಿರುವ ಸಾಯಿಶ್ರುತಿ ಯವರು ನೂರಾರು ಪ್ರದರ್ಶನಗಳನ್ನು ನೀಡಿದ್ದಾರೆ.