ಪರಸ್ಪರ ಸಹೋದರತೆ ಮತ್ತು ಬಾಂಧವ್ಯವನ್ನು ಭದ್ರಗೊಳಿಸಲು ಮಹಮ್ಮದ್ ಸಖಾಫಿ ಅಲ್ ಹಿಕಮಿ ಕರೆ
ಕೊಯಿನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮದ ಸಡಗರದ ಬಕ್ರೀದ್ ಆಚರಿಸಲಾಯಿತು. ಈದ್ ನಮಾಝ್, ಖುತುಬಾ, ಸಾಮೂಹಿಕ ಪ್ರಾರ್ಥನೆ ಜರುಗಿತು. ಜಮಾಅತಿನ ಸರ್ವ ಸದಸ್ಯರು, ಊರಿನವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಈದ್ ಸಂದೇಶ ನೀಡಿದ ಸ್ಥಳೀಯ ಖತೀಬರಾದ ಮಹಮ್ಮದ್ ಸಖಾಫಿ ಅಲ್ ಹಿಕಮಿ ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದ್ದು ನಾವೆಲ್ಲರೂ ಸಹೋದರತ್ವ ಮತ್ತು ಪರಸ್ಪರ ಸೌಹಾರ್ದತೆಯ ಜೀವನವನ್ನು ಸಾಗಿಸಬೇಕಾಗಿದೆ ಎಂದು ಕರೆ ನೀಡಿದರು.
ನಂತರ ಖಬರ್ ಝಿಯಾರತ್ ನಡೆಸಲಾಯಿತು ಮರಣ ಹೊಂದಿದ ಸದಸ್ಯರನ್ನು ಸ್ಮರಿಸಲಾಯಿತು.
ಬೆಳಗ್ಗಿನಿಂದಲೇ ಹೊಸ ಉಡುಪುಗಳೊಂದಿಗೆ ಸರ್ವರು ಪರಸ್ಪರ ಆಲಿಂಗನ ನಡೆಸಲಾಯಿತು.