ಸುಳ್ಯದ ತಾಲೂಕು ಕಚೇರಿಯ ಸರ್ವೆ ಇಲಾಖೆಗೆ ಸಂಬಂಧ ಪಟ್ಟ ರೆಕಾರ್ಡ್ ರೋಮಿನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಇಂದು ಬೆಳಗ್ಗೆ ಪ್ರತ್ಯಕ್ಷವಾಗಿದೆ.
ಬೆಳಗ್ಗೆ ಸಿಬ್ಬಂದಿಯವರು ಬಂದು ಬಾಗಿಲು ತೆಗೆದು ನೋಡಿದಾಗ ಹೆಬ್ಬಾವು ಕಂಡಿತು. ತಕ್ಷಣ ವಿಷಯ ತಿಳಿದ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ತಿಳಿಸಿದರು. ಇಲಾಖೆಯ ವರು ಉರಗ ತಜ್ಞ ಮೋಹನ್ ಪರಿವಾರಕಾನ ರವರನ್ನು ಕರೆಸಿದರು.
ಮೋಹನ್ ರವರು ಹಾವನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟರೆಂದು ತಿಳಿದು ಬಂದಿದೆ.
ತಾಲೂಕು ಕಚೇರಿಯ ಎರಡನೇ ಮಹಡಿಯಲ್ಲಿ ಭೂ ದಾಖಲೆಗಳ ನಿರ್ದೇಶಕರ ಕಚೇರಿ ಇದ್ದು ಹಾವು ಇಲ್ಲಿಗೆ ಹೇಗೆ ಬಂತೆಂಬುದು ಎಲ್ಲರಲ್ಲಿಯೂ ಕಾಡಿದೆ ಪ್ರಶ್ನೆಯಾಗಿದೆ.