ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂದರಿಂದ ನಾಲ್ಕನೆಯ ತರಗತಿಯ ಪ್ರಥಮ ಪೋಷಕ ಸಭೆಯು ಜೂ. 19 ಸೈಂಟ್ ಬ್ರಿಜಿಡ್ಸ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಸಭಾಧ್ಯಕ್ಷತೆಯನ್ನು ಪಾದರ್ ವಿಕ್ಟರ್ ಡಿಸೋಜಾರವರು ವಹಿಸಿದ್ದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ನವೀನ್ ಮಚಾದೊ , ಪ್ರಾಥಮಿಕ ಶಾಲಾ ಪೋಷಕ ಅಧ್ಯಕ್ಷರಾದ ಜೆ.ಕೆ. ರೈ , ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಮೇರಿ ಸ್ಟೆಲ್ಲಾ, ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಶಿಕ್ಷಕಿ ಶ್ರೀಮತಿ ಪ್ರೆಸ್ಸಿಲ್ಲ ಪಿಂಟೊ ರವರು ಸ್ವಾಗತಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಶಿಕ್ಷಕಿ ಶ್ರೀಮತಿ ಜ್ಯೋತಿ ಇವರು ವರದಿ ಸಲ್ಲಿಸಿ ಮುಖ್ಯೋಪಾಧ್ಯಾಯನಿ ಸಲಹೆ ಸೂಚನೆ ನೀಡಿದರು. ನೂತನ ಪೋಷಕ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .ನಂತರ ಪೋಷಕರ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಹಿಂದಿನ ಪೋಷಕ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಪುಷ್ಪಲತಾ ಇವರು ವಂದನಾರ್ಪಣೆ ಮಾಡಿದರು. ನಿರೂಪಕರಾಗಿ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಸರಸ್ವತಿ ಮತ್ತು ಶ್ರೀಮತಿ ವಿದ್ಯಾಶ್ರೀ ಅವರು ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.