ಕೊಡಗು ಸಂಪಾಜೆ : ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನ

0

ರಾತ್ರಿಯ ವೇಳೆ ಕಳ್ಳರ ತಂಡವೊಂದು ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕೊಡಗು ಸಂಪಾಜೆ ಗ್ರಾಮದ ಚಡಾವಿನಲ್ಲಿ ಜೂ.19ರಂದು ರಾತ್ರಿ ಸಂಭವಿಸಿದೆ.

ಕೊಡಗು ಸಂಪಾಜೆ ಗ್ರಾಮದ ಚಡಾವಿ ಬಬಿನ್ ಎಂಬವರ ಮನೆಗೆ ರಾತ್ರಿ 3 ಗಂಟೆ ವೇಳೆಗೆ ಕಳ್ಳರ ತಂಡವೊಂದು ನುಗ್ಗಲು ಯತ್ನಿಸಿದ್ದು, ಮನೆಯವರಿಗೆ ಹೊರಗಡೆ ಮಾತಿನ ಸ್ವರ ಕೇಳಿದ ಹಿನ್ನೆಲೆಯಲ್ಲಿ ಲೈಟ್ ಹಾಕಿದಾಗ ಮೂರ್ನಾಲ್ಕು ಮಂದಿ ಮನೆಯ ಸಮೀಪವಿರುವ ಕೊಟ್ಟಿಗೆಯಿಂದ ಓಡಿ ಹೋದರೆಂದು ತಿಳಿದುಬಂದಿದೆ.