ಅರಂತೋಡು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ಕುಡಿಯುವ ನೀರು ಮತ್ತು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ FTK KIT ಉಪಯೋಗಿಸಿ ಕುಡಿಯುವ ನೀರಿನ ಶುದ್ಧತೆಯ ಪರೀಕ್ಷೆ ಯ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಯಿತು . ತರಬೇತಿಯನ್ನು ಜಿಲ್ಲಾ ಪಂಚಾಯತ್ ನ JJM ನ ವಿಭಾಗದ ಸುರೇಶ್ ಬಿ, ಅಭಿಲಾಷ್ ಕೆ ಎಲ್, ವಿಘ್ನೇಶ್ ರಾಜ್ ಬಿ ಕೆ ನೀಡಿದರು.
ಸದರಿ ತರಬೇತಿಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಕೇಶವ ಅಡ್ತಲೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ಗಂಗಾಧರಬನ, ಸದಸ್ಯರಾದ ಶ್ರೀಮತಿ ಮಾಲಿನಿ ಉಳುವಾರು, ಸರಸ್ವತಿ ಬಿಳಿಯಾರು, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಆರ್ ಗ್ರಾಮ ಪಂಚಾಯತ್ ನ ಸಿಬ್ಬಂದಿ ಗಳು, ಕುಡಿಯುವ ನೀರು ನಿರ್ವಹಣೆದಾರರು, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಸದಸ್ಯರುಮುಂತಾದವರು ಭಾಗವಹಿಸಿದರು.
ಸದರಿ ತರಬೇತಿಯ ನಂತರ ಅವರ ನಿರ್ದೇಶನ ನ ಪ್ರಕಾರ ಅರಂತೋಡು ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿರುವ ಶಾಲೆಗಳಿಂದ ಮತ್ತು ಅಂಗನವಾಡಿಗಳಿಂದ ಸಂಗ್ರಹಿಸಿದ ನೀರನ್ನು ಪರೀಕ್ಷೆ ಮಾಡಲಾಯಿತು.