ಸುಳ್ಯ ನ್ಯಾಯಾಲಯದಲ್ಲಿ ಯೋಗ ದಿನಾಚರಣೆ

0

ಸುಳ್ಯ ನ್ಯಾಯಾಲಯದಲ್ಲಿ ಯೋಗ ದಿನಾಚರಣೆಯನ್ನು ವಕೀಲರ ಸಂಘದ ಸಭಾಂಗಣದಲ್ಲಿ ಇಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಮೋಹನ್ ಬಾಬು, ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ , ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಸಹಾಯಕ ಸರ್ಕಾರಿ ಅಭಿಯೋಜಕರಾದ ಆರೋನ್ ಡಿಸೋಜ ಮತ್ತು ರಮೇಶ್ ಆರ್ ಹಾಗೂ ವಕೀಲ ವೃಂದದವರು, ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಯೋಗ ಶಿಕ್ಷಕಿಯಾಗಿ ಶ್ರೀಮತಿ ಸುನಂದಾ ಶೆಟ್ಟಿ ಯೋಗದ ಬಗ್ಗೆ ಮಾರ್ಗದರ್ಶನ ನೀಡಿದರು. ಹಾಗೂ ಅವರ ಯೋಗ ಶಿಬಿರಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ವಾಗತ ಹಾಗೂ ಧನ್ಯವಾದ ವನ್ನು ಶಿರಸ್ತೆದಾರ್ ಗಿರೀಶ್ ರವರು ನೆರವೇರಿಸಿದರು.