ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ– ಯೋಗ ತರಬೇತಿ ಕಾರ್ಯಗಾರ

0

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಕಾರ್ಯಗಾರ ಜೂ. 21ರಂದು ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಹಾಗೂ ಈಶ ಯೋಗ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳಿಗೆ ಈಶ ಯೋಗಕೇಂದ್ರ ಮಂಗಳೂರಿನ ಕು. ಸೃಷ್ಠಿ ಎಸ್. ಶೆಟ್ಟಿಯವರು ಯೋಗ ಪ್ರಾತ್ಯಕ್ಷಿಕೆಯೊಂದಿಗೆ, ಯೋಗದ ಮಹತ್ವವನ್ನು ತಿಳಿಸುತ್ತಾ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ಕವಿತಾ ಬಿ. ಎಂ., ಸಂಸ್ಥೆಯ ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ. ಜಿ., ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜಯವಾಣಿ ಯಂ. ಜಿ., ಡಾ. ಶಭೀನಾ ಟಿ. ಟಿ. ಹಾಗೂ ಡಾ. ಐಶ್ವರ್ಯ ಬಾಲಗೋಪಾಲ್. ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.