ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನಾಚರಣೆ

0

ಯಾವುದೇ ರೋಗವಿಲ್ಲದೆ ಬದುಕುವ ಚಿಕಿತ್ಸೆ ಯೋಗ : ಸತ್ಯನಾರಾಯಣ

ಯೋಗ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿ ಯಾಗುತ್ತದೆ ನಿರಂತರ ಯೋಗ ಮಾಡುವುದರಿಂದ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ರೋಗಗಳಿಲ್ಲದೆ ಬದಕಲು ಸಾಧ್ಯವಾಗುತ್ತದೆ ಎಂದು ಸುಳ್ಯ ವೃತ‌ ನಿರೀಕ್ಷಕರಾದ ಸತ್ಯನಾರಾಯಣ ಹೇಳಿದರು.


ಸಾಂದೀಪ್ ವಿಶೇಷ ಚೇತನ ಮಕ್ಕಳ ಶಾಲೆ ನಡೆಸುತ್ತಿರುವ ಎಂ ಬಿ ಸದಾಶಿವ ರವರ ಸೇವೆ ದೇವರು ಮೆಚ್ಚುವಂತ ಸೇವೆ ಇಂತಹ ಸೇವೆ ಅದು ದೇವತಾ ಸೇವೆ ಈ ರೀತಿಯ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಹೇಳಿದರು
ಯೋಗ ದಿನಾಚರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಬಿ ಫೌಂಡೇಶನ್
ಅಧ್ಯಕ್ಷ ಎಂ ಬಿ ಸದಾಶಿವ ‌ವಹಿಸಿದ್ದರು.


ಮಂಗಳೂರು ಲಯನ್ಸ್ ಕ್ಲಬ್ ನ ಅನಿಲ್ ಕುಮಾರ್,ಲ.ಮೋಹನ್ ದಾಸ್ ಕಿಲ್ಲೆ,ಲ.ಮನೋರಂಜನ್,ಲ.ಲೋಕೇಶ್ ಉಳ್ಳಾಲ್,ಸರ್ಕಲ್ ಇನ್ಸ್ಪೆಕ್ಟರ್ ಕಛೇರಿ ಯ ರಂಜಿತ್ ರೈ ಮಂಜುನಾಥ್, ಮೇಘ ,ಡಾ.ಪ್ರಜ್ವಲ್ ಮೊದಲಾದವರು ವೇದಿಕೆಯಲ್ಲಿದ್ದರು.

ಎಂ ಬಿ ಫೌಂಡೇಷನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ಧನ್ಯವಾದ ಸಮರ್ಪಿಸಿದರು.

ಬಳಿಕ ನಡೆದ ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.