ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಪೋಷಕರ ಪ್ರಥಮ ಸಭೆ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಪೋಷಕರ ಸಭೆಯು ಜೂ.22 ರಂದು ಸಂತ ಬ್ರಿಜಿಡ್ಸ್ ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿಸೋಜರವರು, ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ರವರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ನವೀನ್ ಮಚದೋ,ಶಾಲಾ ಪ್ರಾಥಮಿಕ ವಿಭಾಗದ ಶಿಕ್ಷಕ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಜ್ಯೋತಿ ಅವರು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವರದಿಯನ್ನು ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ರವರು ಶಾಲಾ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಪೋಷಕ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು .ಎಲ್ ಕೆಜಿ ಎ ವಿಭಾಗದಿಂದ ಪ್ರಬೋದ್ ಶೆಟ್ಟಿ ,ಎಲ್ ಕೆಜಿ ಬಿ ವಿಭಾಗದಿಂದ ಶ್ರೀಮತಿ ಶ್ಯಾಮಲ , ಯುಕೆಜಿ ಎ ವಿಭಾಗದಿಂದ ಶ್ರೀಮತಿ ಲಿಖಿತ ಯು ಎಚ್ , ಯುಕೆಜಿ ಬಿ ವಿಭಾಗದಿಂದ ಸಂದೀಪ್ ರವರನ್ನು ಆಯ್ಕೆಯಾದರು .ನಂತರ ಇವರಲ್ಲಿ ಪ್ರಭೋದ ಶೆಟ್ಟಿ ಅವರು ಪ್ರಸಕ್ತ ಸಾಲಿನ ಪೋಷಕ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು .ಇವರೆಲ್ಲರನ್ನು ಶಾಲಾ ಸಂಚಾಲಕರು ಅಭಿನಂದಿಸಿದರು. ನಂತರ ಕಳೆದ ಸಾಲಿನ ಪೋಷಕ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು .


ಸಭೆಯಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ನವೀನ್ ಮಚದೋ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾನ್ವಿತ ಸಂಚಾಲಕರು ಪೋಷಕರಿಗೆ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಮಹತ್ವದ ಬಗ್ಗೆ ಅರಿವು ನೀಡಿದರು. ಸಹ ಶಿಕ್ಷಕಿ ಶ್ರೀಮತಿ ರೇಷ್ಮಾ ರವರು ಸ್ವಾಗತಿಸಿ ,ಸಹ ಶಿಕ್ಷಕಿ ಶ್ರೀಮತಿ ಸುಮತಿಯವರು ವಂದಿಸಿದರು ಶಿಕ್ಷಕಿ ಶ್ರೀಮತಿ ಕವಿತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಮರಿಯ ಕ್ರಾಸ್ತ ಹಾಗೂ ಶ್ರೀಮತಿ ಆಶಾ ರವರು ಸಹಕರಿಸಿದರು.