ಸಂಪಾಜೆಯಲ್ಲಿ ರಕ್ತದಾನ ಶಿಬಿರ

0

ದ. ಕ. ಸಂಪಾಜೆ ಗ್ರಾಮ ಪಂಚಾಯತ್, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ. 30 ನೇ ರಕ್ತದಾನ ಶಿಬಿರವು ಜೂ.23 ರಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಮಾತನಾಡಿ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ, ರಕ್ತದ ಒತ್ತಡ ಕಡಿಮೆಯಾಗುತ್ತದೆ ಹಾಗೂ ತುರ್ತು ಸಂದರ್ಭದಲ್ಲಿ ನಾವು ಕೊಟ್ಟ ರಕ್ತ ಇನ್ನೊಬ್ಬರ ಜೀವ ಉಳಿಸುವ ಕೆಲಸ ಮಾಡುತ್ತದೆ. ಆ ಮೂಲಕ ನಾವೆಲ್ಲರೂ ರಕ್ತದಾನ ಮಾಡೋಣ ಜೀವ ಉಳಿಸೋಣ ಎಂದರು. ಅತಿಥಿಗಳಾಗಿ ಸುಳ್ಯ ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ್ ರೈ ಮಾತನಾಡಿ ರಕ್ತದಾನ ಮಹಾದಾನ .ಒಬ್ಬ ವ್ಯಕ್ತಿಯ ಜೀವ ಉಳಿಸುವಲ್ಲಿ ರಕ್ತದ ಪಾತ್ರ ಬಹುಮುಖ್ಯವಾಗಿ, ಇದು ದೇವರ ಸೇವೆಗೆ ಸಮಾನ . ಎಲ್ಲರೂ ಕೂಡಾ ರಕ್ತದಾನ ಮಾಡಿ ಪುಣ್ಯ ಕಾರ್ಯದಲ್ಲಿ ಮಾದರಿಯಾಗೋಣ ಎಂದರು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಸಂಚಾಲಕರಾದ ಕರೀಂ ಕದ್ಕಾರ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಜಿ. ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ವಿಷ್ಣು ಮೂರ್ತಿ ದೇವಸ್ಥಾನ ಅಧ್ಯಕ್ಷರಾದ ಜಗದೀಶ್ ರೈ, ಪಂಚಾಯತ್ ಸದಸ್ಯರುಗಳಾದ ಸವಾದ್ ಗೂನಡ್ಕ, ಅಬೂಸಾಲಿ ಪಿ. ಕೆ., ವಿಮಲಾ ಪ್ರಸಾದ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಸಲೀಮ್ ಪೆರುಂಗೋಡಿ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ, ಕಾರ್ಯದರ್ಶಿ ಹಮೀದ್ ಸಖಾಪಿ ಪಾಣಾಜೆ, ಅಕ್ಷಯ ಟ್ರಸ್ಟ್ ಮೀಡಿಯಾ ಕಾರ್ಯದರ್ಶಿ ಫೈಝಲ್ ಝುಹರಿ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್, ಅಬ್ಬಾಸ್ ಸಂಟ್ಯಾರ್ ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ ಮೂಡನಕಜೆ, ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು . ಧರ್ಮಸ್ಥಳ ಸಂಘದ ಸೇವಾ ಕೇಂದ್ರದ ಸೇವಾದಾರರಾದ ನಳಿನಿ. ಕೆ. ಹಾಗೂ ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಪಿ.ಕಾಡುಪಂಜ ಚಿದಾನಂದ ರೂಪಶ್ರೀ , ಮೃದುಲಾ ಮಾರ್ಕೆಟಿಂಗ್ ಹಾಗೂ ಪ್ರಗತಿ ಚಿಕನ್ ಹಾಗೂ ಭಾರತ್ ಪೈಂಟ್ ಸಂಸ್ಥೆಯ ಸಿಬ್ಬಂದಿ, ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಕಾರ್ಯದಲ್ಲಿ ಪಾಲ್ಗೊಂಡರು.