ಮುಳ್ಯ- ಅಟ್ಲೂರು ಶಾಲೆಗೆ ಗ್ರಾ.ಪಂ. ಸದಸ್ಯ ವಿಶ್ವನಾಥ ಮುಳ್ಯಮಠರಿಂದ ಕ್ರೀಡಾ ಸಾಮಾಗ್ರಿ ಕೊಡುಗೆ

0

ಅಜ್ಜಾವರ ಗ್ರಾಮದ
ಮುಳ್ಯ -ಅಟ್ಟೂರು ಶಾಲೆಗೆ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಮುಳ್ಯಮಠ ಇವರಿಂದ ವಾಲಿಬಾಲ್ ಕಂಬ ಹಾಗೂ ಇದಕ್ಕೆ ಸಂಬಂಧಿಸಿದ ಕ್ರೀಡಾ ಪರಿಕರ ಸಾಮಾಗ್ರಿಗಳನ್ನು ಶಾಲಾ ಮುಖ್ಯೋಪಾಧ್ಯಾಯನಿ ಎ ಶೋಭಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುರುಷೋತ್ತಮ ನಡುಬೆಟ್ಟು, ಜಯರಾಮ ನಡು ಬೆಟ್ಟು, ರಮನಾಥ ಕಾನ, ನಾರಾಯಣ ಅಟ್ಲೂರು, ಯೋಗೀಶ ಮುಳ್ಯ, ಆರೋಗ್ಯ ಸಹಾಯಕಿ ಮಾಲಿನಿ ಮುಳ್ಯ, ಅಳಕನಂದಿನಿ, ವೀಣಾ, ಸಹನ ಮುಳ್ಯ, ಹಾಗೂ ಮಕ್ಕಳು ಪಾಲ್ಗೊಂಡರು. ಶಿಕ್ಷಕ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.