ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ಬಳಿಯ ನಿವಾಸಿ ದಿ. ಸುಬ್ರಾಯ ಗೌಡರ ಧರ್ಮಪತ್ನಿಯವರು ಅಲ್ಪಕಾಲ ಅಸೌಖ್ಯದಿಂದ ಜೂ.೨೩ ರಂದು ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 87 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಗಿರಿಯಪ್ಪ ಗೌಡ , ಪದ್ಮಯ್ಯ ಸಿ.ಎಚ್., ಆನಂದ, ನಿತ್ಯಾನಂದ, ಪುತ್ರಿಯರಾದ ಗಾಯತ್ರಿ , ಕುಸುಮಾವತಿ, ಯಶೋಧ, ಉಮಾವತಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.