ಸುಳ್ಯದ ಅಂಬಟೆಡ್ಕದಲ್ಲಿ ಸಿರಿ ಧಾನ್ಯಗಳ ಮಳಿಗೆ : ಅದ್ವಿಕಾ ಶ್ರೀ ಧರ್ಮಸ್ಥಳ ಮಿಲೆಟ್ ಹೌಸ್ ಶುಭಾರಂಭ

0

ಸುಳ್ಯದ ಅಂಬಟೆಡ್ಕದಲ್ಲಿ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಎದುರಿನ ಬಿ.ಬಿ. ಕಾಂಪ್ಲೆಕ್ಸ್ ನಲ್ಲಿ ಮೇನಾಲದ ಅಕ್ಷಯ್ ರೈ ಮಾನಲಕತ್ವದ ಅದ್ವಿಕಾ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಮಳಿಗೆಯು ಜೂ.೨೪ರಂದು ಉದ್ಘಾಟನೆಗೊಂಡಿತು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈಯವರು ನೂತನ ಮಳಿಗೆಯನ್ನು ದೀಪ ಬೆಳಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೆಳೆಯುವ ಸುಳ್ಯಕ್ಕೆ ಸಿರಿ ಧಾನ್ಯಗಳ ಮಳಿಗೆ ಅತೀ ಅಗತ್ಯವಾಗಿದೆ. ಇದರ ಉಪಯೋಗ ಜನರು ಪಡೆಯುತ್ತಾರೆ'' ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ ಬಿಸಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಮನೋನ್ ಮಿನೇಜಸ್ ಮಾತನಾಡಿ,ಸಿರಿಧಾನ್ಯ ಆರೋಗ್ಯವರ್ಧಕವಾದ ಆಹಾರ. ನಿತ್ಯ ಜೀವನದಲ್ಲಿ ಇದರ ಬಳಕೆ ಅತ್ಯಗತ್ಯ” ಎಂದು ಹೇಳಿದರು.


ಸುಳ್ಯ ಯೋಜನಾಧಿಕಾರಿ ಮಾಧವ ಗೌಡ, ಅಕ್ಷಯ್ ರೈಯವರ ತಂದೆ ಬಾಲಚಂದ್ರ ರೈ ಮೇನಾಲ, ತಾಯಿ , ಪ್ರಮುಖರಾದ ರಾಮಕೃಷ್ಣ ರೈ ಮೇನಾಲ, ಅಡ್ಕಾರ್ ಎಲೆಕ್ಟ್ರಾನಿಕ್ಸ್ ಮಾಲಕ ದಿನೇಶ್ ಅಡ್ಕಾರು, ರಾಜೇಶ್ ಶೆಟ್ಟಿ ಮೇನಾಲ, ಮನೋಹರ ಕಲ್ಲುಮುಟ್ಲು, ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಪ್ರಭೋದ್ ಶೆಟ್ಟಿ ಮೇನಾಲ, ಮುರಳಿಧರ ರೈ ಮೇನಾಲ, ವಿಶ್ವನಾಥ ಶೆಟ್ಟಿ, ಶಶಿಧರ ಶೆಟ್ಟಿ ಪಡ್ಪು, ಧರ್ಮಸ್ಥಳ ಯೋಜನೆಯ ದ.ಕ. ಜಿಲ್ಲಾ ಮಾರುಕಟ್ಟೆ ಅಧಿಕಾರಿ ಸಂದೀಪ್ ಕೆ. ಮೊದಲಾದವರು ಉಪಸ್ಥಿತರಿದ್ದರು.
ಧಾರವಾಡ ರಾಯಪುರದ ಸಿರಿಧಾನ್ಯ ಘಟಕ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ ಬಿಸಿ ಟ್ರಸ್ಟ್‌ನ ಮಾರುಕಟ್ಟೆ ಯೋಜನಾಧಿಕಾರಿ ರಮೇಶ್ ಯು.ಎಂ. ನಿಯಮಗಳನ್ನು ವಿವರಿಸಿದರು. ಸುಳ್ಯ ವಲಯದ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಿರಿಧಾನ್ಯಗಳಿಂದ ಮಾಡಲಾಗುವ ಎಲ್ಲ ರೀತಿಯ ಉತ್ಪನ್ನಗಳು ಮಳಿಯಲ್ಲಿದೆ ಎಂದು ಮಾಲಕ ಅಕ್ಷರ್ ರೈ ತಿಳಿಸಿದ್ದಾರೆ.