ಸುಳ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪೂರಕವಾಗಿ ಆಗಬೇಕಾದ ವಿವಿಧ ಬೇಡಿಕೆಗಳಿಗೆ ಅನುದಾನ ಪೂರೈಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆದಿಶೇಷ ವಸತಿಗ್ರಹದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಮನವಿ ಸಲ್ಲಿಸಿದರು.
ಬಳಿಕ ಸುಳ್ಯ ಕ್ಷೇತ್ರವಾದ ಅಭಿವೃದ್ಧಿ ಪೂರಕವಾಗಿ ಮಾಡಬೇಕಾದ ಕಚೇರಿ ನಿರ್ಮಾಣ, ಗ್ರಾಮೀಣ ಪ್ರದೇಶಗಳಿಗೆ ರಸ್ತೆ , ಸೇತುವೆ, ನೆಟ್ ವರ್ಕ್ , ವೆಂಟೆಡ್ ಡ್ಯಾಮ್ , ಕೃಷಿಕರ ಸಮಸ್ಯೆ ಮತ್ತು ವಿವಿಧ ಸೌಲಭ್ಯ, ಸುಳ್ಯ ಕ್ಷೇತ್ರದ ಸರಕಾರಿ ಕಚೀರಿಗಳಲ್ಲಿನ ಖಾಲಿ ಹುದ್ದೆ ಭರ್ತಿ, ತಾಲ್ಲೂಕಿಗೆ 110 ಕೆ.ವಿ ಪ್ರಗತಿಯಲ್ಲಿದ್ದು ಆದಷ್ಟು ಬೇಗನೆ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿ ಸೂಚನೆ ನೀಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿಕಾಂಗ್ರೆಸ್ ಮುಖಂಡರಾದ ಆರ್.ಪದ್ಮರಾಜ್, ರಕ್ಷಿತ್ ಶಿವರಾಂ, ಎಂ.ಎಸ್.ಮಹಮ್ಮದ್, ಅಶೋಕ್ ನೆಕ್ರಾಜೆ, ಎಂ.ವೆಂಕಪ್ಪ ಗೌಡ, ಸುಧೀರ್ ಕುಮಾರ್ ಶೆಟ್ಟಿ, ಬೆಟ್ಟ ಜಯರಾಮ್ ಭಟ್, ಜಿ ಕೃಷ್ಣಪ್ಪ ,ಕಿರಣ್ ಬುಡ್ಡೆಗುತ್ತು, ವಿಮಲಾ ರಂಗಯ್ಯ , ಸರಸ್ವತಿ ಕಾಮತ್ ,ದ. ಕ ಜಾಲತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು, ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.