ಸುಳ್ಯ ರೇಂಜ್ ಮದ್ರಸ ಅಧ್ಯಾಪಕರ ಟ್ರೈನಿಂಗ್ ಶಿಬಿರದ ಉದ್ಘಾಟನೆ

0

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಮದ್ರಸ ಅಧ್ಯಾಪಕ ಒಕ್ಕೂಟ ಎಸ್ ಜೆ ಎಂ ಕೇಂದ್ರ ಸಮಿತಿ ಪ್ರಾಯೋಜಕತ್ವದ ಅರೇಬಿಕ್ ಹಸ್ತಾಕ್ಷರ ಪರಿಶೀಲನೆ ಹಾಗೂ ಮೂವತ್ತು ಘಂಟೆಗಳ ವಿಶೇಷ ತರಬೇತಿ ಶಿಬಿರ ಎಸ್ ಜೆ ಎಂ ಸುಳ್ಯ ರೇಂಜ್ ಆಯೋಜಿಸಿದ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಅಧ್ಯಕ್ಷತೆ ವಹಿಸಿದರು.

ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.


ಸಂಪನ್ಮೂಲ ವ್ಯೆಕ್ತಿಗಳಾಗಿ ಆಗಮಿಸಿದ ಟ್ರೈನರ್ ಸಿ ಪಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅರೀಕ್ಕೋಡು ತರಬೇತಿ ನೀಡಿದರು.


ರೇಂಜ್ ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ಪ್ರಾಸ್ಥಾವಿಕ ಭಾಷಣಗೈದು,ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಗಾಂಧಿನಗರ ಮದ್ರಸ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ಶುಭ ಹಾರೈಸಿದರು.


ರೇಂಜ್ ಉಪಾಧ್ಯಕ್ಷರುಗಳಾದ ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ನೌಶಾದ್ ಮದನಿ ಅನ್ಸಾರಿಯ್ಯಾ,ಕಾರ್ಯದರ್ಶಿಗಳಾದ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ,ಅಬ್ದುರ್ರಶೀದ್ ಝೈನಿ ಶಾಂತಿನಗರ ಹಾಗೂ ರೇಂಜ್ ವ್ಯಾಪ್ತಿಯ ಮದ್ರಸಗಳ ಸದರ್ ಮುಅಲ್ಲಿಂ,ಅಧ್ಯಾಪಕರುಗಳು ಉಪಸ್ಥಿತರಿದ್ದರು.
ರೇಂಜ್ ಟ್ರೈನಿಂಗ್ ವಿಭಾಗ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ,ವಂದಿಸಿದರು.