ಸರಿಪಡಿಸದಿದ್ದಲ್ಲಿ ಅಪಾಯ ಖಚಿತ
ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ಮುಖ್ಯ ರಸ್ತೆಯ ಬದಿ ವೀರ ಕೇಸರಿ ಆಟೋ ನಿಲ್ದಾಣಕ್ಕೆ ತಾಗಿಕೊಂಡಿರುವ ಕಾಂಪೌಂಡ್ ಶಿಥಿಲಾವಸ್ತೆಗೊಂಡು ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿ ನಿಂತಿದೆ.
ಇಲ್ಲಿ ಪಕ್ಕದಲ್ಲಿ ಆಟೋ ಚಾಲಕರಿಗೆ ವಿಶ್ರಾಂತಿ ಪಡೆದುಕೊಳ್ಳಲು ಬೆಂಚ್ ಗಳನ್ನು ಅಳವಡಿಸಿದ್ದು ಇದರಲ್ಲಿ ನಿಲ್ದಾಣಕ್ಕೆ ಬರುವ ಆಟೋ ಚಾಲಕರು ನಿರಂತರವಾಗಿ ವಿಶ್ರಾಂತಿಗಾಗಿ ಕುಳಿತಿರುವುದು ಕಂಡು ಬರುತ್ತದೆ.
ಗೋಡೆ ಅಲ್ಲಲ್ಲಿ ಬಿರುಕುಗೊಂಡಿದ್ದು,ಗೋಡೆಯ ತಳಭಾಗ ಸಂಪೂರ್ಣ ಶಿಥಿಲಗೊಂಡು ಒಂದು ಭಾಗಕ್ಕೆ ವಾಲಿ ನಿಂತಿದೆ. ಅಲ್ಲದೆ ಮಳೆ ಗಾಲದ ಹಿನ್ನಲೆಯಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದೆ. ಸಂಭಂದಪಟ್ಟವರು ಕೂಡಲೆ ಇತ್ತ ಗಮನ ಅರಿಸಿ ಮುಂದೆ ಉಂಟಾಗಬಲ್ಲ ಅಪಾಯವನ್ನು ತಪ್ಪಿಸಬೇಕಾಗಿದೆ.