ಕಲ್ಮಡ್ಕ: ರಸ್ತೆ ತಿರುವಿನಲ್ಲಿ ಅಪಾಯ ಕಾದಿದೆ

0

ಬಾಳಿಲ-ಕುಕ್ಕುಜಡ್ಕ ರಸ್ತೆಯ ಕಲ್ಮಡ್ಕ ಶಾಲೆಯ ಸಮೀಪ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಭಾರಿ ಆಳವಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಇಲ್ಲಿ ಜೂ.23 ರಂದು ರಾತ್ರಿ ಬೈಕೊಂದು ಉರುಳಿದ್ದು,ಸವಾರ ಪವಾಡ ಸದೃಶ ಪಾರಾಗಿದ್ದಾರೆ.

ರಸ್ತೆಯ ಬದಿ ಬಹಳಷ್ಟು ಕಿರಿದಾಗಿದ್ದು ರಸ್ತೆ ಇನ್ನೊಂದು ಬದಿಯನ್ನು ಅಗಲ ಗೊಳಿಸಿ,ಅಪಾಯದ ಜಾಗಕ್ಕೆ ಶಾಶ್ವತ ತಡೆ ಬೇಲಿ ನಿರ್ಮಿಸಿ ಮುಂದೆ ಸಂಭವಿಸ ಬಹುದಾದ ಅಪಾಯವನ್ನು ತಪ್ಪಿಸ ಬೇಕಾಗಿದೆ.