ಕೊಡಗು ಸಂಪಾಜೆ ಗ್ರಾಮದ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕೊಯನಾಡು ಶಾಲೆಯ ಕೊಠಡಿಯ ಬದಿಗೆ ಬರೆ ಜರಿದು ಹಾನಿಯಾದ ಸ್ಥಳಕ್ಕೆ ಮಡಿಕೇರಿ ತಾಲೂಕು ಶಿಕ್ಷಣಾಧಿಕಾರಿ ದೊಡ್ಡೇಗೌಡ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಶಾಲಾ ಆಡಳಿತ ಮಂಡಳಿಯವರು ಎ. ಎಸ್. ಪೊಣ್ಣಣ್ಣ ನವರಿಗೆ ಮಾಹಿತಿ ಮತ್ತು ಮನವಿ ನೀಡಿದ್ದು, ವಿದ್ಯಾರ್ಥಿಗಳ ಮುಂಜಾಗೃತಾ ಕ್ರಮವಾಗಿ ಬಿದ್ದಂತಹ ಮಣ್ಣನ್ನು ತೆರವು ಗೊಳಿಸಿ, ಬರೆಯನ್ನು ಸಮತಟ್ಟು ಮಾಡಿ,ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರ ಸೂಚನೆಯಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ ಆರ್ ಪಿ, ಶಾಲಾ ಮುಖ್ಯೋಪಾಧ್ಯಾಯರು ಹಂಸಕಲಾ, ಎಸ್ ಡಿ ಎಂ ಸಿ ಅಧ್ಯಕ್ಷ ನವೀನ್ ಕುಮಾರ್, ಹಿರಿಯ ವಿದ್ಯಾರ್ಥಿ ಅಧ್ಯಕ್ಷ ಹನೀಫ್ ಎಸ್ ಪಿ,ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್,ಉಮೇಶ್, ಕುಸುಮಕರ, ನಸೀರ್ ಮಾಡಶೇರಿ,ಅಶ್ರಫ್ ಹೆಚ್ಎ. ಮತ್ತಿತರರು ಹಾಜರಿದ್ದರು.