ಬಳ್ಪ ಗ್ರಾಮದ ಪಾದೆ ಬಳಿ ವಾಸವಾಗಿದ್ದ, ಪ್ರಸ್ತುತ ಬೆಟ್ಟಂಪಾಡಿಯಲ್ಲಿ ನೆಲೆಸಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ನೋಂಡ ಇಂದು ನಿಧನರಾದರು. ಇವರಿಗೆ 96 ವರ್ಷ ವಯಸ್ಸಾಗಿತ್ತು. ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಕೆ.ಎಂ.ಎಫ್ ನಿರ್ದೇಶಕರಾಗಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷತೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಶ್ರೀಮತಿ ಗುಲಾಬಿ, ಪುತ್ರರಾದ ಶಿರ್ವ ಸೈಂಟ್ ಮೆರಿಸ್ ವಿದ್ಯಾಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೇಣುಗೋಪಾಲ ನೋಂಡ, ಪುತ್ರಿಯರಾದ ನಿವೃತ್ತ ಉಪನ್ಯಾಸಕಿ ಶ್ರೀಮತಿ ವಿಜಯ ನೋಂಡ, ಶ್ರೀಮತಿ ವಿದ್ಯಾ ನೋಂಡ, ಶ್ರೀಮತಿ ವಿಮಲಾ ರಂಗಯ್ಯ ಸೇರಿದಂತೆ ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ನಾಳೆ ಬೆಳಿಗ್ಗೆ ಬೆಟ್ಟಂಪಾಡಿಯಲ್ಲಿ ನಡೆಯಲಿದೆ ಎಂದು ಮೃತರ ಪುತ್ರ ತಿಳಿಸಿದ್ದಾರೆ.