ಒಂದು ಗಿಡವನ್ನು ಪಡೆದುಕೊಳ್ಳುವುದು ಮಗುವನ್ನು ಪಡೆದು ಕೊಂಡಂತೆ ಡಾ. ಚಂದ್ರ ಶೇಖರ ದಾಮ್ಲೆ
ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ವಾಕ್ಯದೊಂದಿಗೆ ಸಮಾಜ ಕಾರ್ಯಗಳಲ್ಲಿ ತೊಡಗಿ ಬರುವ ಸುಳ್ಯ ತಾಲ್ಲೂಕಿನ ಅಮರ ಸಂಘಟನಾ ಸಮಿತಿ ವತಿಯಿಂದ ವನಮಹೋತ್ಸವ ಅಂಗವಾಗಿ ಸಾರ್ವಜನಿಕರಿಗೆ ಉಚಿತ 1000 ಸಸಿ ವಿತರಣೆ ಕಾರ್ಯಕ್ರಮ (ಜೂ 30) ರಂದು ಪ್ರಭು ಬುಕ್ ಸ್ಟಾಲ್ ಹತ್ತಿರ ನಡೆಯಿತು.
ಕಾರ್ಯಕ್ರಮವು ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಸಾತ್ವಿಕ್ ಮಡಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಚಂದ್ರ ಶೇಖರ ದಾಮ್ಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ” ಗಿಡವನ್ನು ಪಡೆದು ಕೊಂಡು ಹೋಗುವುದು ಮಗುವನ್ನು ಪಡೆದು ಕೊಳ್ಳವ ಹಾಗೆ ಮಗುವನ್ನು ಹುಟ್ಟಿನಿಂದ ಸಾಯುವ ತನಕ ಪೋಷಣೆ ಆರೈಕೆ ಮಾಡಿ,ನೋಡಿ ಕೊಳ್ಳುತ್ತೇವೂ ಅದೇ ರೀತಿ ಗಿಡಗಳನ್ನು ನಾವು ಆರೈಕೆ ಮಾಡಬೇಕು. ಇಂದಿನ ಕಾಲದಲ್ಲಿ ಗಿಡ ಮರಗಳನ್ನು ಕಡಿದು ಸಂಪೂರ್ಣ ನಾಶ ಮಾಡುವ ಹೀನಾಯ ಕೃತ್ಯ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಮರಗಳ ಸಂಖ್ಯೆ ಕಡಿಮೆಯಾಗಿ ಆಹಾರದ ಕೊರತೆಯಿಂದ ಪ್ರಾಣಿ -ಪಕ್ಷಿಗಳು ಕಾಡಿನಿಂದ ನಾಡಿಗೆ ವಲಸೆ ಬರುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳ ಆಯೋಜನೆಯಿಂದ ಪರಿಸರ ಸ್ನೇಹ ಮನುಷ್ಯನಲ್ಲಿ ಹುಟ್ಟಲಿ, ಎಲ್ಲರೂ ಕೂಡಾ ಪರಿಸರ ಸಂರಕ್ಷಣೆಯ ಮಹತ್ವ ಇತರರಿಗೂ ತಿಳಿಸಿ, ಕಾರ್ಯಕ್ರಮ ಗಳನ್ನು ಮಾಡುವ ಮುಲಕ, ಒಂದೇ ಎಂಬ ವಾಕ್ಯದೊಂಗೆ ಎಲ್ಲಾರು ಕೂಡಾ ಕೈ ಜೋಡಿಸಿ ಗಿಡಗಳನ್ನು ನೆಟ್ಟು ನಾಡನ್ನು ಉಳಿಸೋಣ” ಎಂದು ಹೇಳಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ “. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಗಿಡ ಮರಗಳು ನೆಟ್ಟು ಪೋಷಣೆ ಮಾಡಿ, ಇತರರಿಗೂ ಪ್ರೇರಣೆಯ ಸಂದೇಶವನ್ನು ನೀಡುವ ಮೂಲಕ, ಸಂಘಟನೆಗಳ, ಅಧಿಕಾರಿಗಳ ಮೂಲಕ ಪ್ರತಿಯೊಂದು ಮನೆಗೂ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿ ಪ್ರಯೋಜನವನ್ನು ಪಡೆದುಕೊಂಡು, ನಮ್ಮ ನೆಲ, ಜಲ, ವಾಯು ಎಂದು ಭಾವಿಸಿ, ಇಂತಹ ಪ್ರಯೋಜನಾಕಾರಿ ಸಂಘಟನೆಗಳು ಮತ್ತು ಕಾರ್ಯ ಕ್ರಮಗಳು ಜಾರಿಗೆ ಬರಲಿ” ಎಂದರು
ಸುಳ್ಯ ಉಪವಲಯ ಅರಣ್ಯಧಿಕಾರಿ ಆನಂದ ಮೋಹಿತೆ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹಕ್ಕು, ಇಂದು ನೆಟ್ಟ ಗಿಡವನ್ನೇ ಕಡಿದು ಮಾರುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರಿಂದ ಮಾನವ ಇದ್ದ ಅರಣ್ಯ ಪ್ರದೇಶವನ್ನು ಕಡಿದು ಮನೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ಇದರಿಂದ ಆಮ್ಲ ಜನಕ ಮಟ್ಟ ಕಮ್ಮಿಯಾಗಿದೆ. ಎಲ್ಲರೂ ಕೂಡಾ ತಮ್ಮ ಮನೆಯಲ್ಲಿ, ರಸ್ತೆ ಬದಿಗಳಲ್ಲಿ ಗಿಡ ವನ್ನು ನೆಟ್ಟು ಮುಂದಿನ ತಲಮಾರಿಗೂ ಪ್ರೇರಣೆ ಯಾಗಿ ಪರಿಸರವನ್ನು ಉಳಿಸುವ ಕಾರ್ಯಗಳಲ್ಲಿ ತೊಡಗೋಣ”ಎಂದರು.
ಪ್ರಭು ಬುಕ್ ಸ್ಟಾಲ್ ಮಾಲೀಕ ಅಶೋಕ್ ಪ್ರಭು ಕೆ ಸಾರ್ವಜನಿಕರಿಗೆ 7 ತಳಿಗಳ 1000 ಸಸಿಗಳ ಉಚಿತವಿತರಣೆಗೆ ಚಾಲನೆ ನೀಡಿದರು. ವಿಶೇಷವಾಗಿ ಗಿಡ ಗಳ ಸಂರಕ್ಷಣೆಯ ನಾಮಫಲಕಗಳು ಗಮನ ಸೆಳೆಯಿತು.
ಮುಖ್ಯ ಅತಿಥಿಗಳಾಗಿ ಆರಕ್ಷಕ ಠಾಣೆ ಎ. ಎಸ್. ಐ ತಾರಾನಾಥ್, ನಗರ ಪಂಚಾಯತ್ ಮುಖ್ಯಧಿಕಾರಿ ಎಂ. ಎಚ್. ಸುಧಾಕರ್, ಗುರುಪ್ರಸಾದ್ ಶಾಮಿಯಾನ ಮಾಲೀಕ ಜಿ. ಜಿ. ನಾಯಕ, ನಗರ ಪಂಚಾಯತ್ ಸದಸ್ಯ ರಾಜು ಪಂಡಿತ್, ಅಮರ ಅಮರ ಸಂಘಟನಾ ಸದಸ್ಯರು , ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರದೀಪ್ ಬೊಳ್ಳೂರು ಪ್ರಾಸ್ತಾವಿಕ, ಸಾವಿತ್ರಿ ಕಣೆ ಮರಡ್ಕ ಸ್ವಾಗತಿಸಿ, ಹರ್ಷಿತ್ ಮರ್ಕಂಜ ನಿರೂಪಿಸಿ,ಶಶಿಕಾಂತ್ ಮಿತ್ತೂರು ಧನ್ಯವಾದಿಸಿದರು.