ಚೆಂಬು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಯಮುನಾ.ಎನ್.ಜಿ ವಯೋ ನಿವೃತ್ತಿ, ಬೀಳ್ಕೊಡುಗೆ

0

ಚೆಂಬು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯಮುನಾ.ಎನ್.ಜಿ ಅವರು ತಮ್ಮ ಸುದೀರ್ಘ 28 ವರ್ಷಗಳ ಶಿಕ್ಷಕ ವೃತ್ತಿಜೀವನದಿಂದ ಜೂ.30ರಂದು ವಯೋ ನಿವೃತ್ತಿಹೊಂದಿದ್ದು, ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡಲಾಯಿತು.

ಪ್ರೌಢಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಶ್ರೀಮತಿ ಯಮುನಾ ಮತ್ತು ದಾಮೋದರ ದಂಪತಿಗಳನ್ನು ಎಸ್.ಡಿ.ಎಂ.ಸಿ. ಸದಸ್ಯರುಗಳು ಮತ್ತು ಶಾಲಾ ಸ್ಥಳದಾನಿಗಳಾದ ಶ್ರೀಮತಿ ಹೊಸೂರು ಪಾರ್ವತಿ ತೇಜೇಶ್ವರ ಪ್ರಸಾದ್ ಮತ್ತು ಮೇಲ್ಚೆಂಬು ಪುಷ್ಪಲತಾ ವಿಶ್ವನಾಥ್ ರವರು ಶಾಲಾ ಪರವಾಗಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ದಿನಕರ, ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕ ವೃಂದ ,ವಿದ್ಯಾರ್ಥಿಗಳು ,ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅರ್ಪಿತಾ ಸ್ವಾಗತಿಸಿ, ವಿದ್ಯಾರ್ಥಿ ಸೃಜನ್ ವಂದಿಸಿದರು. ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.


ಶ್ರೀಮತಿ ಯಮುನ ಅವರು1964ರಲ್ಲಿ ಅರಂತೋಡಿನ ನಂಗಾರು ಮನೆ ಗುಡ್ಡಪ್ಪ ಗೌಡ ಮತ್ತು ಕಮಲಾ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿದ್ದು, ಅರಂತೋಡು ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಸ.ಪ.ಪೂ.ಕಾಲೇಜು, ಸುಳ್ಯದಲ್ಲಿ ಪ್ರೌಢ ಶಿಕ್ಷಣ ನೆರವೇರಿಸಿದರು. ಬಿ. ಎ.ಪದವಿಯನ್ನು ಸುಳ್ಯದ ಎನ್ನೆಂಸಿಯಲ್ಲಿ ಪೂರೈಸಿದರು. 1996ರಲ್ಲಿ ಸುಳ್ಯದ ಸ.ಪ.ಪೂ. ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಜೀವನ ಆರಂಭಿಸಿದ ಅವರು 2019ರಲ್ಲಿ ಚೆಂಬು ಪ್ರೌಢಶಾಲೆಗೆ ವರ್ಗಾವಣೆಗೊಂಡರು.

ಬಳಿಕ ಮುಖ್ಯೋಪಾಧ್ಯಾಯರಾಗಿ ಭಡ್ತಿಹೊಂದಿ ಜೂ.30ರಂದು ನಿವೃತ್ತಿ ಹೊಂದಿದ್ದಾರೆ.


ಇವರ ಪತಿ ದಾಮೋದರ ಸಿ.ಬಿ. ಅವರು ಕೊಡಗಿನ ಮಡಿಕೇರಿಯಲ್ಲಿ ಕಂದಾಲ ಇಲಾಖೆಯ ಉದ್ಯೋಗಿಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ಸುಳ್ಯದಲ್ಲಿ ವಾಸಿಸುತ್ತಿದ್ದಾರೆ.