ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು ಆಯ್ಕೆ
ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಭಜನಾ ಮಂದಿರದ ಶ್ರೀ ಗುರುಸಾರ್ವಬೌಮ ಸಭಾಂಗಣದಲ್ಲಿ ಜೂ.30ರಂದು ನಡೆಯಿತು.
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಧರ್ಮಪಾಲ ಕೆಮನಬಳ್ಳಿ ಮಂಡಿಸಿದರು. ಕಮಲಾಕ್ಷ ನಂಗಾರು ಅವರು ವಾರ್ಷಿಕ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಮೋಹನ ನಂಗಾರು, ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು, ಪ್ರಧಾನ ಕಾರ್ಯದರ್ಶಿಯಾಗಿ ಆತ್ಮಾನಂದ ಗಬ್ಬಲಡ್ಕ, ಖಜಾಂಜಿಯಾಗಿ ಪಿ. ವಿಷ್ಣುಭಟ್ ಪೆರಂಬಾರು, ಕಾರ್ಯದರ್ಶಿಗಳಾಗಿ ಕೃಷ್ಣ ಬೆಳ್ಚಪ್ಪಾಡ ಜಾಲ್ಸೂರು, ಧರ್ಮಪಾಲ ಕೆಮನಬಳ್ಳಿ, ಸ್ವರೂಪ್ ಪಿ.ಆರ್. ಕದಿಕಡ್ಕ, ದಾಮೋದರ ಮಹಾಬಲಡ್ಕ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಮಣಿಯಾಣಿ ಮರಸಂಕ, ಮಾದವ ಗೌಡ ಕಾಳಮನೆ, ಮೋಹನ ಬೆಳ್ಚಪ್ಪಾಡ ಜಾಲ್ಸೂರು, ಸತೀಶ್ ಆಚಾರ್ಯ ಜಾಲ್ಸೂರು, ತಿಮ್ಮಯ್ಯ ಆಚಾರ್ಯ ಜಾಲ್ಸೂರು, ವಿವೇಕ್ ರೈ ಡಿಂಬ್ರಿಗುತ್ತು, ಪರಮೇಶ್ವರ ಕುಂದ್ರುಕೋಡಿ, ನಿಶಾಂತ್ ಮೋಂಟಡ್ಕ, ನಾಗಪ್ಪ ಗೌಡ ಕಾಳಮನೆ, ಜಗದೀಶ ಬೇರ್ಪಡ್ಕ, ಕೆ.ಎಂ. ಬಾಬು ಕದಿಕಡ್ಕ, ಎನ್.ಎಂ. ಸತೀಶ್ ಕೆಮನಬಳ್ಳಿ, ಶಿವಪ್ಪ ಕಜೆಗದ್ದೆ, ಧನುರಾಜ್ ಕದಿಕಡ್ಕ, ಬಾಲಪ್ರದೀಪ ಕಾಟೂರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅನಂತ ಪದ್ಮನಾಭ ಭಟ್ ಕೆಮನಬಳ್ಳಿ, ದಿನೇಶ್ ಮಹಾಬಲಡ್ಕ, ಮೋನಪ್ಪ ಕದಿಕಡ್ಕ, ಶೇಷಪ್ಪ ಶೇಸನಡ್ಕ, ಕದಿರೇಶನ್ ಪಿಳ್ಳೈ ಶೇಸನಡ್ಕ, ರೆದೀಶ್ ಬೇರ್ಪಡ್ಕ, ಗಣೇಶ್ ರೈ ಕುರಿಯ, ಹರೀಶ್ ಬೇರ್ಪಡ್ಕ, ಗೋಪಾಲಕೃಷ್ಣ ಮಹಾಬಲಡ್ಕ, ಸಂದೀಪ್ ಕದಿಕಡ್ಕ, ದಿನೇಶ್ ಬದಿಯಡ್ಕ, ಗಂಗಾಧರ ಕಾಳಮನೆ, ಕಮಲಾಕ್ಷ ನಂಗಾರು ಆಯ್ಕೆಯಾದರು.
ಗೌರವ ಸಲಹೆಗಾರರುಗಳಾಗಿ ಸುಧಾಕರ ಕಾಮತ್ ವಿನೋಬನಗರ, ಐ.ಕೆ. ಹೇಮಚಂದ್ರ ಕದಿಕಡ್ಕ, ಗುರುರಾಜ್ ಭಟ್ ಅಡ್ಕಾರು, ಶಿವರಾಮ ರೈ ಕುರಿಯ, ಎ.ಕೆ. ಉಮನಾಥ ಗೌಡ ಪಟೇಲ್ ಮನೆ, ಎಂ.ಎಸ್. ರಮೇಶ್ ಆದಿಶಕ್ತಿ ಮರಸಂಕ, ರಾಮಕೃಷ್ಣ ಭಟ್ ಪೆರಂಬಾರು ಆಯ್ಕೆಯಾದರು.
ಮಹಿಳಾ ಸಮಿತಿಯ ಸದಸ್ಯರುಗಳಾಗಿ ಶ್ರೀಮತಿ ಈಶ್ವರಿ ಆರ್. ಭಟ್ ಪೆರಂಬಾರು, ಮೋಹಿನಿ ಜಾಲ್ಸೂರು, ವಸಂತಿ ಕಾಳಮನೆ, ಸವಿತ ಪೆರುಮುಂಡ, ಸೀತಾ ಕುಂದ್ರುಕೋಡಿ, ಸರಸ್ವತಿ ಜಾಲ್ಸೂರು, ಶೀಲಾವತಿ ಮಹಾಬಲಡ್ಕ, ವಿಜಯ ಕಾಳಮನೆ, ಜಯಂತಿ ಕಜೆಗದ್ದೆ, ಗಿರಿಜ ಕುಂದ್ರುಕೋಡಿ, ಬೇಬಿ ಶೇಸನಡ್ಕ, ಶ್ರೀಮತಿ ಭವ್ಯ ಧನುರಾಜ್ ಕದಿಕಡ್ಕ, ರಶ್ಮಿ ಕಾಳಮನೆ ಆಯ್ಕೆಯಾದರು.