ತಾತ…ನೀವು ಇದ್ದೀರಿ ನಮ್ಮ ಮನಸಲ್ಲಿ

0

ತಾತ, ನೀವೆಂದರೆ ನನಗೆ ಪ್ರಾಣ
ನೀವು ನೆನಪಾಗುತ್ತೀರಿ ಕ್ಷಣಕ್ಷಣ
ನಿಮ್ಮ ಹೆಸರೇ ಸುಗುಣ

ಹೆಸರಂತೆ ನಿಮ್ಮಲ್ಲಿತ್ತು ಸದ್ಗುಣ
ನಮ್ಮ ಕುಟುಂಬದ ಮೊದಲ ವೈದ್ಯರು ನೀವು
ಮಕ್ಕಳಿಗೆಲ್ಲಾ ಪ್ರೀತಿಯ ತಾತ ನೀವು
ಬಹಳ ವಿಷಯಗಳ ಬಲ್ಲಿದರು ನೀವು
ನಿಮ್ಮ ಪ್ರೀತಿಯ ಪಡೆದ ಪುಣ್ಯವಂತರು ನಾವು.

ತಾತ ಅಂದರೆ ಮಮತೆ ಎಂಬರ್ಥ ತಿಳಿದವರು ನಾವು
ಹೊಸ ಜಗತ್ತನ್ನು ನನಗೆ ತೋರಿದಿರಿ ನೀವು
ಮನೆಯಲ್ಲಿ ಪ್ರಾಣಿ ಪಕ್ಷಿಗಳ ಸಾಕಿದಿರಿ
ಸುಳ್ಯದ ಲಯನ್ ಡಾಕ್ಟರಾಗಿ ಹೆಸರು ಪಡೆದಿರಿ
ಹಿಂದೊಂದು ಮುಂದೊಂದು ಎಂದಿಲ್ಲದೆ
ನೇರ ನಡೆನುಡಿಯಿಂದ ಎಲ್ಲರ ಮನ ಗೆದ್ದು ಆತ್ಮೀಯರಾದಿರಿ
ನಡು ಪ್ರಾಯದಲಿ ಪತ್ನಿಯನು ಕಳಕೊಂಡರೂ
ಎಲ್ಲ ಕಷ್ಟಗಳಿಗೆ ಸಂಜೀವಿನಿಯಾದಿರಿ
ಬಡವ ಬಲ್ಲಿದರೆಂಬ ಭೇದವನು
ಮಾಡದೆ
ಎಲ್ಲರೂ ಬಂಧುಗಳೆ ಎಲ್ಲರೂ ಮಿತ್ರರೇ ಎಂದು ಬಾಳಿದಿರಿ
ಅದಕೆಂದೆ ಜನಮಾನಸದಲ್ಲಿ ಇಂದಿಗೂ ಉಳಿದಿದ್ದೀರಿ
ನೀವು ಧನ್ಯರಾಗಿ ನಮ್ಮನ್ನೂ ಧನ್ಯರಾಗಿಸಿದಿರಿ
ನವ ಚೇತನವೆಂಬ ಆಸ್ಪತ್ರೆ ಯನು ನಡೆಸಿ
ರೋಗಿಗಳಿಗೆ ಚೈತನ್ಯ ತುಂಬಿದಿರಿ
ನಗುನಗುತ್ತಲೇ ಇಚ್ಛಾ ಮರಣಿಯಾಗಿ ನಮ್ಮನ್ನು ಅಗಲಿ ಹೋದಿರಿ
ಆದರೂ ನೀವು ಉಳಿದಿದ್ದೀರಿ ನಮ್ಮ ಮನಸಿನಲ್ಲಿ
ನಮ್ಮ ನೆನಪಿನಲ್ಲಿ

            -   ವಾಗ್ದೇವಿ  ಎಂ. ಡಿ.