ಅರಂಬೂರು ಅಂಬಿಕಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ

0

ಅರಂಬೂರು ಅಂಬಿಕಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಶ್ರೀ ಗೋಪಾಲ ಕೃಷ್ಣ ಸಭಾ ಭವನದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈಯವರ ಅಧ್ಯಕ್ಷತೆಯಲ್ಲಿ ಜೂ.23 ರಂದು ಜರುಗಿತು.ಮೊದಲಿಗೆ ಶ್ರೀಮತಿ ಸತ್ಯಭಾಮಾ ಭಟ್ ರವರು ಪ್ರಾರ್ಥನೆ ಗೈದರು.2022-23 ನೆ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶೀಮತಿ ವೇದಾವತಿಯವರು ಮಂಡಿಸಿದರು.ವಾರ್ಷಿಕ ಲೆಕ್ಕ ಪತ್ರ ಮಂಡನೆಯನ್ನು ಖಜಾಂಜಿ ಶ್ರೀಮತಿ ಹಾರಾವತಿಯವರು ಮಂಡಿಸಿದರು.ಹಿಂದಿನ ಪದಾಧಿಕಾರಿಗಳೇ ಮುಂದುವರೆಯುವುದೆಂದು ಸಭೆಯಲ್ಲಿ ನಿರ್ಣಯಿಸಲಾಯ್ತು.ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾರೈ,ಪೂರ್ವಾಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಶೇಖರ್,ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಕಾರ್ಯದರ್ಶಿ ಶ್ರೀಮತಿ ವೇದಾವತಿ,ಖಜಾಂಜಿ ಶ್ರೀಮತಿ ಹಾರಾವತಿ ಉಪಸ್ಥಿತರಿದ್ದರು. ಶ್ರೀಮತಿ ಅಂಬಿಕಾ ಶ್ರೀ ಶೈಲಂ ಸ್ವಾಗತಿಸಿ,ಶ್ರೀಮತಿ ಪುಷ್ಪಾವತಿ ಕುಡೆಕಲ್ ವಂದಿಸಿದರು.ಶ್ರೀಮತಿ ಚಂದ್ರಾವತಿ ಕಾರ್ಯ ಕ್ರಮ ನಿರ್ವಹಿಸಿದರು . ಕೊನೆಗೆ ರಾಷ್ಟಗೀತೆ ಯೊಂದಿಗೆ ಮಹಾಸಭೆ ಯು ಮುಕ್ತಾಯ ವಾಯಿತು.ಲಘುಉಪಾಹಾರದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು.