ಪೆರುವಾಜೆ ಕಡೆಯಿಂದ ಕೊಡಿಯಾಲ ಸಂಪರ್ಕಿಸುವ ಏನಡ್ಕ ಸಾರಕರೆ ಕಿಂಡಿಅಣೆಕಟ್ಟಿನ ಮೇಲೆ ಸಾರ್ವಜನಿಕರು ಸಂಚರಿಸದಂತೆ ಪಂಚಾಯತ್ ನಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ.
ಬೆಳ್ಳಾರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಡಿಯಲ ಗ್ರಾಮಲೆಕ್ಕಾಧಿಕಾರಿಗಳು ಇಂದು ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿರುವುದಾಗಿ ತಿಳಿದು ಬಂದಿದೆ.
ಜೂ.29 ರಂದು ಶಿಥಿಲಗೊಂಡ ಕಿಂಡಿಅಣೆಕಟ್ಟನ್ನು ನೋಡಲು ಸುಳ್ಯ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಇಒ ಭೇಟಿ ನೀಡಿ ವೀಕ್ಷಿಸಿ ಅಣೆಕಟ್ಟಿನ ಅಡಿಯಲ್ಲಿ ಸಿಲುಕಿದ ಮರಗಳನ್ನು ತೆಗೆಯಲು ಮತ್ತು ಮುರಿದ ಪಾಲದಲ್ಲಿಗೆ ಹೊಸ ಪಾಲ ಹಾಕಲು ಸೂಚಿಸಿದ್ದರು.