ಸುಳ್ಯದ ಕುಲ್ಲುಮುಟ್ಲು ಬಳಿ ನಿರ್ಮಿಸಿರುವ ಕಿಂಡಿಆಣೆ ಕಟ್ಟು ಬಳಿ ಸಾರ್ವಜನಿಕ ಪ್ರವೇಶವನ್ನು ಜು. 1 ರಿಂದ ನಿರ್ಭಂದಿಸಲಾಗಿದೆ.
ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಪಯಶ್ವಿನಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಮುಂಜಾಗ್ರತಾ ಕ್ರಮವಾಗಿ ನಗರಪಂಚಯತ್ ವತಿಯಿಂದ ಸೇತುವೆ ಮುಂಭಾಗ ಫಲಕ ಅಳವಡಿಸಿ ಎಚ್ಚರಿಕೆಯ ಮಾಹಿತಿ ನೀಡಲಾಗಿದೆ.