ಸುಳ್ಯದ
ರಂಗ ಮಯೂರಿ ಕಲಾಶಾಲೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಜು. 6 ರಂದು ಯಕ್ಷಗಾನ ಗೋಷ್ಠಿ ಮತ್ತು ಭಕ್ತ ಸುದನ್ವ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಲಿದೆ.
ಅಪರಾಹ್ನ ನಡೆಯಲಿರುವ
ಯಕ್ಷಗಾನ ಗೋಷ್ಠಿಯ ಅದ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಶಿಶಿಲ ಅಧ್ಯಕ್ಷತೆವಹಿಸಲಿರುವರು. ಲೇಖಕರು, ಸಂಶೋದಕ ಡಾ.ಸುಂದರ ಕೇನಾಜೆ ಹಾಗೂ ಯಕ್ಷಗಾನ ಕಲಾವಿದರು, ಸಂಘಟಕ ನಾರಾಯಣ ದೇಲಂಪಾಡಿ ವಿಚಾರ ಮಂಡಿಸಲಿರುವರು.
ಯಕ್ಷಗಾನ ತಾಳಮದ್ದಳೆ:
ಸಂಜೆ ಗಂಟೆ 4.45 ರಿಂದ ಖ್ಯಾತ ಅರ್ಥಧಾರಿಗಳಾದ ಕಲಾವಿದ ಜಬ್ಬಾರ್ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ವೆಂಕಟ್ರಾಮ್ ಭಟ್ ಸುಳ್ಯ ಇವರ ಸಾರಥ್ಯದಲ್ಲಿ ಭಕ್ತ ಸುದನ್ವ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ,ಚೆಂಡೆ ವಾದಕರಾಗಿ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್,ಮದ್ದಳೆಯಲ್ಲಿ ಶ್ರೀಧರ ವಿಟ್ಲ ರವರು ಭಾಗವಹಿಸಲಿರುವರು.
ಕಲಾಭಿಮಾನಿಗಳಿಗೆ ಮುಕ್ತ ಅವಕಾಶವಿದ್ದು ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಸಂಚಾಲಕ ಲೋಕೇಶ್ ಊರುಬೈಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.