ಪಂಜಿಕಲ್ಲು ಸೇತುವೆ ಮಳೆಗಾಲದಲ್ಲಿ ವೀಕ್ಷಣೆಗೆ ನಿಷೇಧ – ದ್ವಿಚಕ್ರದಲ್ಲಿ ಇಬ್ಬರ ಸಂಚಾರ ಕಂಡರೆ ಕೇಸು

0

ಮಂಡೆಕೋಲು ಗ್ರಾ.ಪಂ. ಪ್ರಾಕೃತಿಕ ವಿಕೋಪ ಸಭೆಯಲ್ಲಿ ‌ನಿರ್ಣಯ

ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಪ್ರಾಕೃತಿಕ ವಿಕೋಪ ಕುರಿತು‌ ಸಭೆಯು ಜು.1ರಂದು ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಕುಶಾಲ ಉದ್ದಂತಡ್ಕ ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಂಚಾಯತ್ ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ವಿನುತಾ ಹರೀಶ್ಚಂದ್ರ, ಪಾತಿಕಲ್ಲು, ತಿಲಕ ಕುತ್ಯಾಡಿ, ಉಷಾ ಗಂಗಾಧರ್, ಗೀತಾ ಮೈಲೆಟ್ಟಿಲಾರೆ, ಅನಿಲ್ ತೋಟಪ್ಪಾಡಿ, ಶಶಿಕಲಾ ಕುಂಟಿಕಾನ, ಗ್ರಾ.ಪಂ. ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ, ಆರೋಗ್ಯ, ಆಶಾ ಕಾರ್ಯಕರ್ತರು, ಸಿ.ಹೆಚ್.ಒ. ಗಳು ಸಭೆಯಲ್ಲಿದ್ದರು.

ಪ್ರಾಕೃತಿಕ ವಿಕೋಪಗಳಾದರೆ ಪಂಚಾಯತ್ ವತಿಯಿಂದ ಮಾಡಲಾಗಿರುವ ತಂಡದ ಕುರಿತು ಮತ್ತು ತಕ್ಷಣ ಪಂಚಾಯತ್ ಗೆ ಮಾಹಿತಿ ನೀಡುವಂತೆ ಪಂಚಾಯತ್ ಪಿಡಿಒ ರಮೇಶ್ ‌ಮಾಹಿತಿ ನೀಡಿದರು.

ಪಂಜಿಕಲ್ಲು ಸೇತುವೆ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿರುವ ಹಾಗೂ ದ್ವಿಚಕ್ರ ವಾಹನದಲ್ಲಿ ಎರಡು – ಮೂರು ಜನರು ಸಂಚಾರ ಮಾಡುತ್ತಿರುವ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.

ನಿರ್ಣಯ : ತೂಗುಸೇತುವೆಯಲ್ಲಿ ದ್ವಿಚಕ್ರ ಸವಾರರು ಕಡ್ಡಾಯವಾಗಿ ಒಬ್ಬರೇ ಸಂಚಾರ ಮಾಡತಕ್ಕದ್ದು, 2 ಜನ ಸಂಚಾರ ಮಾಡುವುದು ಕಂಡು
ಬಂದರೆ ಪ್ರಾಕೃತಿಕ ನಿಯಮದಡಿ ಕೇಸು ದಾಖಲಿಸಲಾಗುವುದು. ಪ್ರವಾಸಿಗರಿಗೆ ಕಡ್ಡಾಯವಾಗಿ ಮಳೆಗಾಲ ಮುಗಿಯುವ ತನಕ ತೂಗು ಸೇತುವೆ ವೀಕ್ಷಣೆಗೆ ನಿಷೇಧಿಸಲಾಗಿದೆ.
ಈ ಮೇಲಿನ ಸೂಚನೆಯನ್ನು ಮೀರಿದಲ್ಲಿ ಪ್ರಾಕೃತಿಕ ವಿಕೋಪ ನಿಯಮದಡಿ ಕೇಸು ದಾಖಲಿಸಲು ನಿರ್ಧರಿಸಲಾಗಿದೆ.

  • ಪ್ರವಾಸಿಗರು ತೂಗುಸೇತುವೆಯಲ್ಲಿ ನಡೆದು ಹೋಗುವಾಗ ಸಾರ್ವಜನಿಕರಿಗೆ ಕಿರುಕುಳ/ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮಕೈಗೊಳ್ಳಲು ನಿರ್ಣಯ ಮಾಡಲಾಗಿದೆ.
    ಸಾರ್ವಜನಿಕರು ದೂರನ್ನು 6361949182 ನಂಬರ್ ಗೆ‌ತಿಳಿಸಬಹುದೆಂದು ನಿರ್ಣಯ ಮಾಡಲಾಯಿತು.