ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ನ್ಯಾಯವಾದಿ ಫವಾಜ್ ಕನಕಮಜಲು, ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ಅನಸೂಯ ಪೆರುವಾಜೆ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜಾರಾಮ ಬೆಟ್ಟ ಹಾಗೂ ಐವರ್ನಾಡಿನ ಕಾಂಗ್ರೆಸ್ ಮುಂದಾಳು ಕರುಣಾಕರ ಮಡ್ತಿಲ ರವರು ಸದಸ್ಯರನ್ನು ರಾಜ್ಯ ಸರಕಾರ ಸದಸ್ಯರನ್ನಾಗಿ ನೇಮಕಗೊಳಿಸಿದ್ದು, ಪುತ್ತೂರು ಸಹಾಯಕ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರ್ ಕಾರ್ಯದರ್ಶಿಯಾಗಿರುತ್ತಾರೆ.