⬆️ ನಿರಂತರ ಗ್ರಾಮ ಸಭೆ ನಿರ್ಣಯಗಳಿಗೆ -ಹೋರಾಟಕ್ಕೆ ಬೆಲೆಯೇ ಇಲ್ಲವೇ?
⬆️ ಖಾಲಿ ಇರುವ ಹುದ್ದೆಗಳಿಗೆ ನೇಮಕವಾಗಲಿ
ಪಂಜ ಹೋಬಳಿ ಕೇಂದ್ರ. ಹೋಬಳಿ ಕೇಂದ್ರದ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಆದರೆ ಸತ್ಯಾಗ್ರಹ ಹೋರಾಟ, ಜನ ಪ್ರತಿನಿಧಿಗಳ ಪ್ರಯತ್ನ, ಗ್ರಾಮ ಸಭೆಗಳ ನಿರ್ಣಾಯ ನಿರಂತರವಾಗಿ ನಡೆದರೂ ಮೇಲ್ದರ್ಜೆಗೆ ಏರುವುದು ಕನಸಾಗಿಯೇ ಉಳಿದಿದೆ. ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೆಲವು ಹುದ್ದೆಗಳು ಖಾಲಿಯಿದೆ.
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ವಿಭಾಗ, ಅಪರೇಷನ್ ವಿಭಾಗ, ಆಮ್ಲಜನಕ ವಿಭಾಗ ,ವೈದ್ಯಾಧಿಕಾರಿ, ಸುರಕ್ಷಾಧಿಕಾರಿಗಳು, ಹಾಗೂ ಇತರ ಸಿಬ್ಬಂದಿಗಳು ,ವಸತಿ ಗೃಹ ಇದ್ದರೂ ದಿನದ 24 ಗಂಟೆಗಳ ಆರೋಗ್ಯ ಸೇವೆ ಇಲ್ಲದಿರಿವುದರಿಂದ ಸಂಜೆ ಬಳಿಕ ತುರ್ತು ಆರೋಗ್ಯ ಸೇವೆ ಇಲ್ಲವಾಗಿದೆ.
ಕಲ್ಮಕಾರು , ಬಾಳುಗೋಡು ಮೊದಲಾದ ಸುಮಾರು 40 ಕಿ.ಮೀ ಮಿಕ್ಕಿ ದೂರದಿಂದ ಗ್ರಾಮೀಣ ಭಾಗದ ಜನರು ಹೋಬಳಿ ಕೇಂದ್ರದ ಕಚೇರಿ ಕೆಲಸಗಳಿಂದ ಪ್ರತಿ ದಿನ ಬರುತ್ತಾರೆ. ಆದರೆ ಇಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ನೀಡುವ ಸರಕಾರಿ ಆಸ್ಪತ್ರೆ ಇಲ್ಲದಿರುವುದು ವಿಪರ್ಯಾಸ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಅದೇಷ್ಟೋ ಜನ ಪ್ರಾಣ ಬಿಟ್ಟಿದ್ದಾರೆ.
ಈ ಹಿಂದೆ ಮೇಲ್ದರ್ಜೆಗೆ ಏರಿಸುವ ಮಂಜೂರಾತಿ ಹಂತಕ್ಕೆ ತಲುಪಿ ಮತ್ತೆ ಪ್ರಗತಿ ಕಾಣಲಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ವಿಶೇಷವಾಗಿ ಗಮನ ಹರಿಸಿ ಹೋಬಳಿ ಕೇಂದ್ರಕ್ಕೆ. ಅತೀ ಅವಶ್ಯವಿರುವ ಆರೋಗ್ಯ ಸೇವೆಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡ ಬೇಕು. ಈಗಿರುವ ಆರೋಗ್ಯ ಕೇಂದ್ರಕ್ಕೂ ಖಾಲಿ ಇರುವ ಹುದ್ದೆಗಳನ್ನು ತುಂಬವ ಕೆಲಸ ಮಾಡ ಬೇಕಾಗಿದೆ .-ಮಧು ಪಂಜ