ಪಂಜ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಅಣೆಕಟ್ಟುನಲ್ಲಿ ಸಿಲುಕಿದ ಭಾರಿ ಗಾತ್ರದ ಮರಗಳ ತೆರವು

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್, ಪಂಜ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ 10 ಮಂದಿ ಘಟಕದ ಸ್ವಯಂಸೇವಕರು ಸೇರಿ ಪಂಜ ಸಮೀಪ ಬೊಳ್ಮಲೆ-ಬಸ್ತಿಕಾಡು ಎಂಬಲ್ಲಿರುವ ಕಿಂಡಿ ಅಣೆಕಟ್ಟುಗೆ ಬಾರಿ ಮಳೆಯಿಂದ ಆಣೆಕಟ್ಟುಗೆ ಅಡ್ಡಲಾಗಿ ಸಿಲುಕಿದ್ದ ಭಾರಿ ಗಾತ್ರದ ಮರಗಳನ್ನು ಹಾಗೂ ಕಸ ಕಡ್ಡಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು .


ಈ ಸೇವಾಕಾರ್ಯದಲ್ಲಿ ಪಂಜ
ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ವಿಶ್ವನಾಥ ಸಂಪ,
ಧರ್ಮ ಪಾಲ,ಮಾಧವ ಗೌಡ ,ವೆಂಕಪ್ಪ,ವಾಸುದೇವ, ಸುಂದರ,ನಳಿನಿ,ಚಂದ್ರಾವತಿ,ವಿಮಲ, ದೇವಕಿ ಭಾಗವಹಿಸಿದ್ದರು.
ಈ ಸಂದರ್ಭ ಕೂತ್ಕುಂಜ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕವಿತಾ ಉಪಸ್ಥಿತರಿದ್ದರು.